ಚೆನ್ನೈ(ಅ.13): ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾರ ಕುರಿತು ಪ್ರತಿದಿನ ಒಂದೊಂದೇ ಸಂದೇಹಗಳು ಏಳುತ್ತಿವೆ. ಜಯಾ ಕುರಿತು ತಾವು ನೀಡುತ್ತಿರುವ ವೈದ್ಯಕೀಯ ಬುಲೆಟಿನ್ ಬಗ್ಗೆ ಸ್ವತಃ ಅಪೋಲೋ ಆಸ್ಪತ್ರೆಯ ವೈದ್ಯರಿಗೇ ಅಸಮಾಧಾನವಿದೆ ಎಂಬ ಮಾತುಗಳೂ ಇದೀಗ ಕೇಳಿಬರತೊಡಗಿವೆ. ಯಾರದ್ದೋ ಒತ್ತಡಕ್ಕೆ ಮಣಿದು ವೈದ್ಯರು ಅಂತಹು ಬುಲೆಟಿನ್‌ಗಳು ನೀಡುತ್ತಿದ್ದಾರೆಂಬ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ ಎಂದು ಸ್ಟ್‌ಪೋಸ್ಟ್ ವರದಿ ಮಾಡಿದೆ. ಮತ್ತೊಂದು ವಿಶೇಷವೆಂದರೆ, ರಾಜ್ಯಪಾಲ ವಿದ್ಯಾಸಾಗರ್ ರಾವ್ ಸೇರಿದಂತೆ ಆಸ್ಪತ್ರೆಗೆ ಭೇಟಿ ನೀಡಿದ ಯಾರು ಕೂಡ ಈವರೆಗೆ ಜಯಾರನ್ನು ಮುಖತಃ ನೋಡಿಯೇ ಇಲ್ಲ ಎಂಬ ಅಂಶವೂ ಇದೀಗ ಹೊರಬಿದ್ದಿದೆ.