ರೈಲ್ವೆ ಇಲಾಖೆಯ ಸಂಚಾರಿ ರೈಲು ಆಸ್ಪತ್ರೆ ಲೈಫ್'ಲೈನ್ ಎಕ್ಸ್'ಪ್ರೆಸ್'ನಲ್ಲಿ ಆಪರೇಶನ್ ಮಾಡಿಸಿಕೊಂಡ ಕ್ಯಾನ್ಸರ್ ರೋಗಿಗಳ ಬಾಳು ಈಗ ಅಯೋಮಯವಾಗಿದೆ.
ಕಾರವಾರ (ನ.23): ರೈಲ್ವೆ ಇಲಾಖೆಯ ಸಂಚಾರಿ ರೈಲು ಆಸ್ಪತ್ರೆ ಲೈಫ್'ಲೈನ್ ಎಕ್ಸ್'ಪ್ರೆಸ್'ನಲ್ಲಿ ಆಪರೇಶನ್ ಮಾಡಿಸಿಕೊಂಡ ಕ್ಯಾನ್ಸರ್ ರೋಗಿಗಳ ಬಾಳು ಈಗ ಅಯೋಮಯವಾಗಿದೆ.
ಉಚಿತ ಆಪರೇಷನ್ ಮಾಡಿಸಿಕೊಂಡು ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದು ನಂಬಿ ಬಂದ ಬಡ ರೋಗಿಗಳು ಈಗ ಪರದಾಡುವಂತಾಗಿದೆ. ಕ್ಯಾನ್ಸರ್ ಅಪರೇಷನ್ ಮಾಡಿದ ತಜ್ಞ ವೈದ್ಯರು ರೋಗಿಗಳನ್ನು ಕುಮಟಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ತೆರಳಿದ್ದಾರೆ. ರೋಗಿಗಳನ್ನು ಉಪಚರಿಸುವ ಜವಾಬ್ದಾರಿ ಹೊತ್ತಿದ್ದ ಸರ್ಕಾರಿ ಆಸ್ಪತ್ರೆ ವೈದ್ಯರು ಈಗ ನಿರ್ಲಕ್ಷ್ಯ ವಹಿಸಿದ್ದಾರೆ. ವಿಶೇಷ ಚಿಕಿತ್ಸೆ ನೀಡಬೇಕಿದ್ದ ರೋಗಿಗಳನ್ನ ಆಸ್ಪತ್ರೆಯಲ್ಲಿ ನಿರ್ಲಕ್ಷಿಸಲಾಗಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ.
(ಸಾಂದರ್ಭಿಕ ಚಿತ್ರ)
