ಸ್ಟಾಕ್‌ಹೋಮ್: ಈ ಬಾರಿಯ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯು ಭಾರಿ ವಿವಾದದ ಕಾರಣ ರದ್ದಾಗಿದೆ. 70 ವರ್ಷದ  ಇತಿಹಾಸದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆ ರದ್ದಾಗಿದ್ದು ಇದೇ ಮೊದಲು. 

ನೊಬೆಲ್ ಸಾಹಿತ್ಯ ಪ್ರಶಸ್ತಿಯ ಆಯ್ಕೆ  ಸಮಿತಿಯಲ್ಲಿನ ಸದಸ್ಯರೊಬ್ಬರು ಲೈಂಗಿಕ ಕಿರುಕುಳ ಹಗರಣದ ಆರೋಪಿಯೊಂದಿಗೆ ನಂಟು ಹೊಂದಿದ್ದೇ ಈ ವಿದ್ಯಮಾನಕ್ಕೆ ಕಾರಣ. ‘ಸ್ವೀಡಿಷ್ ಅಕಾಡೆಮಿಯ ಸಮಗ್ರತೆ ಕಾಪಾಡಲು ಈ ಕ್ರಮ ಜರುಗಿಸಲಾಗಿದೆ’ ಎಂದು ಅಕಾಡೆಮಿ ಹೇಳಿದೆ. 2018ರಲ್ಲಿ ನೊಬೆಲ್ ಸಾಹಿ ತ್ಯ  ಪ್ರಶಸ್ತಿ ಪ್ರಕಟಿಸದೇ 2019 ರಲ್ಲಿ ಒಟ್ಟಿಗೇ ಇಬ್ಬರು ವಿಜೇತರ ಹೆಸರು ಘೋಷಿಸಲಾಗುತ್ತದೆ ಎಂದು ಅದು ತಿಳಿಸಿದೆ. 

ಏನಿದು ವಿವಾದ?: ಆಯ್ಕೆ ಸಮಿತಿ ಸದಸ್ಯೆ ಕವಯಿತ್ರಿ ಕ್ಯಾಟರಿನಾ ಫ್ರಾಸ್ಟೆನ್ಸನ್ ಎಂಬುವರ ಪತಿ ಜೀನ್ ಕ್ಲಾಡ್ ಅರ್ನಾರ್ಲ್ಟ್, ನೊಬೆಲ್ ಸಂಸ್ಥೆ ಕಚೇರಿಯ ೧೮ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕ್ಯಾಟಾರಿನಾ ತಮ್ಮ ನೊಬೆಲ್ ಸದಸ್ಯತ್ವ ತೊರೆದಿದ್ದರು. ಇದರ ಬೆನ್ನಲ್ಲೇ ರಾಜೀ ನಾಮೆ ಪರ್ವದಿಂದಾಗಿ, ಪ್ರಸಕ್ತ ವರ್ಷದ ಸಾಹಿತ್ಯ ನೊಬೆಲ್ ಗೌರವ ರದ್ದಾಗಿದೆ.