Asianet Suvarna News Asianet Suvarna News

ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ!

ಡೆನಿಸ್ ಮುಕ್ವೆಜ್ ಮತ್ತು  ನಾಡಿಯಾ ಮುರಾದ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ! ಲೈಂಗಿಕ  ಹಿಂಸೆಯನ್ನು ಯುದ್ದಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟ! ಯುದ್ಧಾಪರಾಧಗಳ ವಿರುದ್ಧದ ಹೋರಾಟಕ್ಕಾಗಿ  ಪ್ರಮುಖ ಕೊಡುಗೆ! ಐಸಿಸ್ ಉಗ್ರರಿಂದ  ಅಪಹರಣಕ್ಕೊಳಗಾಗಿ ಅತ್ಯಾಚಾರಕ್ಕೊಳಗಾಗಿದ್ದ ನಾಡಿಯಾ ಮುರಾದ್!

Nobel Peace Prize for Dr. Denis Mukwege and Yazidi rights activist Nadia Murad
Author
Bengaluru, First Published Oct 5, 2018, 4:30 PM IST

ನ್ಯೂಯಾರ್ಕ್(ಅ.5):  ಡೆನಿಸ್ ಮುಕ್ವೆಜ್ ಮತ್ತು  ನಾಡಿಯಾ ಮುರಾದ್‌ಗೆ 2018 ರ  ವಿಶ್ವದ ಅತ್ಯುನ್ನತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ.

ಲೈಂಗಿಕ  ಹಿಂಸೆಯನ್ನು ಯುದ್ದಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅವರಿಗೆ  2018 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇಬ್ಬರು ಪ್ರಶಸ್ತಿ  ಪುರಸ್ಕೃತರು ಯುದ್ಧಾಪರಾಧಗಳ ವಿರುದ್ಧದ ಹೋರಾಟಕ್ಕಾಗಿ  ಪ್ರಮುಖ ಕೊಡುಗೆ ನೀಡಿದ್ದಾರೆ.

ವೈದ್ಯರಾಗಿರುವ ಡೆನಿಸ್ ಮುಕ್ವೆಜ್  ಹೀಗೆ ಬಲಿಯಾದವರಿಗಾಗಿ ತಮ್ಮ ಜೀವಮಾನ ಹೋರಾಟ ನಡೆಸಿದ್ದಾರೆ. ನಾಡಿಯಾ ಮುರಾದ್ ತಾವೇ ಇದಕ್ಕೆ  ಸಾಕ್ಷಿಯಾಗಿದ್ದು,  ತಮ್ಮ ಹಾಗೂ ಇತರ ಮೇಲೆ ಆದ ಅಪರಾಧಗಳ ಬಗ್ಗೆ  ಹೇಳಿಕೊಂಡಿದ್ದಾರೆ.

ಯುದ್ದದ ಸಂದರ್ಭದಲ್ಲಿ ಲೈಂಗಿಕ ಹಿಂಸೆ ಹಾಗೂ ಸಶಸ್ತ್ರ ಸಂಘರ್ಷದ ವಿರುದ್ಧ  ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಕೇತವಾಗಿ ಡೆನಿಸ್ ಮುಕ್ವೆಜ್  ಹೋರಾಟ ನಡೆಸಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ನಾಡಿಯಾ ಮುರಾದ್, ಇರಾಕ್ ನಲ್ಲಿನ  ಯಾಜಿಡಿ ಅಲ್ಪಸಂಖ್ಯಾತರ ಗುಂಪಿನ ಸದಸ್ಯರಾಗಿದ್ದು, ಐಸಿಸ್ ಉಗ್ರರಿಂದ  ಅಪಹರಣಕ್ಕೊಳಗಾಗಿ  ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದಾರೆ. ಸ್ವತಃ ನೋವು ನುಂಗಿಕೊಂಡು ಎಲ್ಲವನ್ನು ಧೈರ್ಯದಿಂದ ಎದುರಿಸಿದ್ದಾರೆ ಎಂದು ನೊಬೆಲ್  ಪ್ರಶಸ್ತಿ ಸಮಿತಿ ತಿಳಿಸಿದೆ.

Follow Us:
Download App:
  • android
  • ios