ಬೆಂಗಳೂರು (ಜು. 06): ಜುಲೈ ತಿಂಗಳು ಬಂದರೂ ರಾಜ್ಯದಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಬೆಂಗಳೂರಿನಲ್ಲಿಂತೂ ಮಳೆಯೇ ಇಲ್ಲ. ಹೀಗೆ ಮುಂದುವರೆದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.  

ಬೆಂಗಳೂರಿಗೆ ನೀರು ಸರಬರಾಜು ಆಗೋದು ಕೇವಲ ಒಂದು ತಿಂಗಳು ಮಾತ್ರ.  ಕೆ.ಆರ್.ಎಸ್ ನಲ್ಲಿ 80 ಅಡಿ ಮಾತ್ರ ನೀರಿದೆ. ಇನ್ನೊಂದು ತಿಂಗಳು ಮಾತ್ರ ನೀರು ಸರಬರಾಜು ಮಾಡಲು ಅವಕಾಶ ಇದೆ. ಮಳೆ ಬಾರದೇ ಇದ್ದರೆ ಬೆಂಗಳೂರಿಗೆ ನೀರಿಲ್ಲ.  ಮಳೆ ಬಿಟ್ಟು ಪರ್ಯಾಯ ಯಾವುದೇ ಮಾರ್ಗ ನಮ್ಮ ಬಳಿ ಇಲ್ಲ. ಮಾನ್ಸೂನ್ ಚುರುಕಾಗಿ ಕೆಆರ್ ಎಸ್ ಗೆ ನೀರು ಬರಬೇಕಷ್ಟೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.  

ಶರಾವತಿ ನೀರು ತರಲು ಡಿಪಿಆರ್ ಮಾಡಲು ಸೂಚನೆ ನೀಡಿದ್ದೇವೆ. ಬೇರೆ ಎಲ್ಲಿಂದ ನೀರು ತರಲು ಅವಕಾಶವಿದೆ ಎನ್ನುವುದನ್ನು ನೋಡಬೇಕು. ಎಲ್ಲಿಂದ ನೀರು ತರುವುದಾದ್ರೂ ಮಳೆ ಬರಲೇಬೇಕು. ಪರ್ಯಾಯ ಮಾರ್ಗಗಳಿಲ್ಲ ಎಂದ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.