ಕಾಂಗ್ರೆಸ್ ನಾಯಕರಾದ ಈ ಸಹೋದರರ ನಡುವೆ 15 ವರ್ಷಗಳಿಂದ ಮಾತಿಲ್ಲ..!

First Published 9, Mar 2018, 1:46 PM IST
No Talk Between This Congress Leaders
Highlights

ಜಾರಕಿಹೊಳಿ ಸಹೋದರರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ 15 ವರ್ಷಗಳಿಂದ ಪರಸ್ಪರ ಮಾತೇ ಆಡಿಲ್ಲ.

ಬೆಳಗಾವಿ: ಜಾರಕಿಹೊಳಿ ಸಹೋದರರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ 15 ವರ್ಷಗಳಿಂದ ಪರಸ್ಪರ ಮಾತೇ ಆಡಿಲ್ಲ.

ಆದರೂ ಆರೋಪ-ಪ್ರತ್ಯಾರೋಪಗಳಿಗೆ ಕೊರತೆ ಇಲ್ಲ. ರಾಜಕೀಯದಲ್ಲಿ ಗಟ್ಟಿ ನೆಲೆ ಕಾಣುವಲ್ಲಿ ವಿಫಲರಾದ ಮತ್ತೊಬ್ಬ ಸಹೋದರ ಭೀಮಶಿ ಜಾರಕಿಹೊಳಿ ಉಳಿದ ಸಹೋದರರಿಂದ ದೂರವೇ ಇದ್ದಾರೆ.

ಆದರೆ ಜಾರಕಿಹೊಳಿ ಸಹೋದರರಲ್ಲಿ ಭಾರಿ ಭಿನ್ನಾಭಿಪ್ರಾಯವಿದೆ ಎನ್ನುವುದನ್ನು ಜನ ನಂಬುವುದಿಲ್ಲ. ‘ಇದು ತೋರಿಕೆಗಷ್ಟೆ. ಆಂತರ್ಯದಲ್ಲಿ ಅವರು ಯಾವತ್ತೂ ಒಂದೇ’ ಎನ್ನುವ ವಾದವಿದೆ.

loader