ಬೆಂಗಲೂರು[ನ.26]: ಅಂಬರೀಶ್ ಅಂತಿಮ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯುತ್ತದೆ ಎನ್ನಲಾಗಿತ್ತು. ಆದರೀಗ ಭಾನುಪ್ರಕಾಶ್ ರವರು ಕೊನೆ ಕ್ಷಣದಲ್ಲಿ ಮಾಡಿರುವರು ಮಾಡಿರುವ ಮನವಿ ಮೇರೆಗೆ  ಅಂಬಿ ಅಂತಿಮ ಸಂಸ್ಕಾರ ಯಾವುದೇ ನಿಗಧಿತ ಸಂಪ್ರದಾಯದಂತೆ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ.

ಅಂಬಿ ಎಲ್ಲರ ಜೊತೆ ಸ್ನೇಹದಿಂದ ಇದ್ದ ಕಾರಣ ಪಂಚಭೂತಗಳಲ್ಲಿ ಲೀನ ಆಗುವಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಆದಿ ಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿಗಳಿಗೆ ಮಾಡಿದಂತೆಯೇ ಎಲ್ಲಾ ಶಾಸ್ತ್ರಗಳು ನಡೆಯಲಿವೆ. 

ಈ ಹಿಂದೆ ನಿರ್ಧರಿಸಿದಂತೆ ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಅಂತಿಮ ಸಂಸ್ಕಾರ ಮಾಡ ಮಾಡಬೇಕಾಗಿತ್ತು. ಆದರೆ ಖ್ಯಾತ ವೈಧಿಕ ಡಾ. ಭಾನುಪ್ರಕಾಶ್ ರವರು ಸುಮಲತಾ ಮತ್ತು ಅಭಿಶೇಕ್ ಬಳಿ ಮನವಿ ಮಾಡಿ ಪಂಚಭೂತದಲ್ಲಿ ಲೀನಗೊಳಿಸಲು ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಂತಿಮ ಸಂಸ್ಕಾರದ ವಿಧಿ ವಿಧಾನದಲ್ಲಿ ಮೂರು ಅಥವಾ ನಾಲ್ಕು ಬ್ರಾಹ್ಮಣರು ಭಾಗಿಯಾಗಲಿದ್ದಾರೆ.