Asianet Suvarna News Asianet Suvarna News

ಯೋಧರ ಸಂಖ್ಯೆಯಲ್ಲಿ ಕಡಿತವಿಲ್ಲ: ಚೀನಾ ಹೇಳಿಕೆಗೆ ಭಾರತ ಪ್ರತಿಕ್ರಿಯೆ

ಡೋಕ್ಲಾಮ್’ನಲ್ಲಿ ಸೇನೆಯು ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂಬ ಚೀನಾದ ಹೇಳಿಕೆಯನ್ನು ಭಾರತವು ಅಲ್ಲಗಳೆದಿದೆ. ಚೀನಾ ಹೇಳಿರುವಂತೆ ಭಾರತವು ಯೋಧರ ಸಂಖ್ಯೆಯನ್ನು ಕಡಿಮೆಗೊಳಿಸಿಲ್ಲವೆಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.

No reduction in troops at Dokalam  Says India

ನವದೆಹಲಿ: ಡೋಕ್ಲಾಮ್’ನಲ್ಲಿ ಸೇನೆಯು ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂಬ ಚೀನಾದ ಹೇಳಿಕೆಯನ್ನು ಭಾರತವು ಅಲ್ಲಗಳೆದಿದೆ.

ಚೀನಾ ಹೇಳಿರುವಂತೆ ಭಾರತವು ಯೋಧರ ಸಂಖ್ಯೆಯನ್ನು ಕಡಿಮೆಗೊಳಿಸಿಲ್ಲವೆಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.

ಜೂನ್’ನಲ್ಲಿ ಡೋಕ್ಲಾಮ್’ನಲ್ಲಿ ಸುಮಾರು 400 ಯೋಧರಿದ್ದರು, ಜುಲೈ ಅಂತ್ಯದಲ್ಲಿ ಕೇವಲ 40 ಇದೆಯೆಂದು ನಿನ್ನೆ ಚೀನಾ ವಿದೇಶಾಂಗ ಇಲಾಖೆಯು ದಾಖಲೆಗಳನ್ನು ಬಿಡುಗಡೆ ಮಾಡಿತ್ತು.

ಚೀನಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತವು, ಕಳೆದ 6 ವಾರಗಳಿಂದ ಡೋಕ್ಲಾಮ್’ನಲ್ಲಿ ಯಥಾಸ್ಥಿತಿ ಇದೆ. 350 ಭಾರತೀಯ ಯೋಧರು ಅಲ್ಲಿದ್ದಾರೆ ಎಂದು ಹೇಳಲಾಗಿದೆ.

ಚೀನಾ ಭಾರತ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನಗೊಳಿಸಬೇಕಾದರೆ ಭಾರತ ಮೊದಲು ತನ್ನ ಸೇನೆಯನ್ನು ನಿಶರ್ತವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಪಟ್ಟು ಹಿಡಿದಿದೆ.

ಡೋಕ್ಲಾಮ್ ವಿಚಾರವಾಗಿ ಮಾತುಕತೆ ನಡೆಯಬೇಕಾದರೆ ಚೀನಾ ತನ್ನ  ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಲಬೇಕೆಂದು ಭಾರತವು ಕೂಡಾ ಹೇಳಿದೆ.

Follow Us:
Download App:
  • android
  • ios