ಬಿಜೆಪಿ ಹಣಿಯಲು ಒಂದಾದ ಪಕ್ಷಗಳಿಂದ ಹೊಸ ಒಪ್ಪಂದ

No-poaching pact as SP and BSP seek to build trust for 2019 election
Highlights

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾದಂತೆ ಕಂಡು ಬರುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮಹತ್ವದ ಒಮ್ಮತವೊಂದಕ್ಕೆ ಬಂದಿವೆ. ಉಭಯ ಪಕ್ಷಗಳ
ಅತೃಪ್ತ ನಾಯಕರನ್ನು ಪರಸ್ಪರ ಸೆಳೆದುಕೊಳ್ಳದಿರಲು ಅವು ನಿರ್ಧರಿಸಿವೆ. 
 

ಲಖನೌ: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾದಂತೆ ಕಂಡು ಬರುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಮಹತ್ವದ ಒಮ್ಮತವೊಂದಕ್ಕೆ ಬಂದಿವೆ. ಉಭಯ ಪಕ್ಷಗಳ ಅತೃಪ್ತ ನಾಯಕರನ್ನು ಪರಸ್ಪರ ಸೆಳೆದುಕೊಳ್ಳದಿರಲು ಅವು ನಿರ್ಧರಿಸಿವೆ. 

ಬಿಎಸ್ ಪಿ ಯಾವುದೇ ವ್ಯಕ್ತಿ ಬಂಡೆದ್ದರೆ ಅವರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಳ್ಳ ಬಾರದು. ಅದೇ ರೀತಿ ಸಮಾಜವಾದಿ ಪಕ್ಷದಿಂದ  ಬಂಡೆದ್ದರೆ ಅವರನ್ನು ಬಿಎಸ್‌ಪಿಗೆ ಸೇರಿಸಿಕೊಳ್ಳಬಾರದು. ವಿಶ್ವಾಸವೃದ್ಧಿಗಾಗಿ ಈ ಕ್ರಮಕ್ಕೆ ಕೈಹಾಕಬೇಕು ಎಂದು ಉಭಯ ಪಕ್ಷಗಳು ನಿರ್ಧರಿಸಿವೆ. 

ಇದರ ಬೆನ್ನಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರರ ಪಕ್ಷಕ್ಕೆ ಪಕ್ಷಾಂತರ ನಿಲ್ಲಿಸಿದ್ದಾರೆ ಎಂದು ಸಮಾಜವಾದಿ ಪಾರ್ಟಿ ವಕ್ತಾರ  ರಾಜೇಂದ್ರ ಚೌಧರಿ ತಿಳಿಸಿದ್ದಾರೆ. 2019 ರಲ್ಲಿ ಬಿಜೆಪಿ ಮಣಿಸಲು ಮೈತ್ರಿ ಅನಿವಾರ್ಯ ಎಂದು ಬಿಎಸ್‌ಪಿ-ಎಸ್ಪಿ ಮನಗಂಡಿವೆ. ಅದಕ್ಕೆಂದೇ ಅವು ವಿಶ್ವಾಸವೃದ್ಧಿ ಕ್ರಮಕ್ಕೆ ಮುಂದಾಗಿವೆ. ಇತ್ತೀಚಿನ ಫೂಲ್‌ಪುರ, ಗೋರಖಪುರ ಹಾಗೂ ಕೈರಾನಾ ಲೋಕಸಭಾ ಉಪಚುನಾವಣೆಗಳಲ್ಲಿ ಎಸ್‌ಪಿ-ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ಮೈತ್ರಿಕೂಟ ಜಯಿಸಿದೆ.

loader