73ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ| ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ| ಅಸಹಿಷ್ಣುತೆ ವಿರುದ್ಧ ಸಮರಕ್ಕೆ ಸೋನಿಯಾ ಗಾಂಧಿ ಕರೆ| ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತಬೇಕು ಎಂದ ಸೋನಿಯಾ ಗಾಂಧಿ| ನೈಜ ಜಾತ್ಯಾತೀತ ಭಾರತದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದ ಸೋನಿಯಾ|

ನವದೆಹಲಿ(ಆ.15): ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

Scroll to load tweet…

73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸೋನಿಯಾ, ಎಲ್ಲಾ ರಂಗಗಳಲ್ಲಿಯೂ ಅಸಹಿಷ್ಣುತೆ ಎದ್ದು ಕಾಣುತ್ತಿದ್ದು, ದೇಶದ ಮೂಲ ತತ್ವವಾದ ಸತ್ಯ, ಅಹಿಂಸೆ, ಅನುಕಂಪ ದೇಶಭಕ್ತಿಯ ತತ್ವಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ದೂರಿದರು.


ದೇಶದಲ್ಲಿ ಧರ್ಮಾಂಧತೆ, ಮೂಢನಂಬಿಕೆ ಮತಾಂಧತೆ, ಅಸಹಿಷ್ಣುತೆಗಳಿಗೆ ಸ್ಥಾನವಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಅಸಹಿಷ್ಣುತೆ ರಾಜಕೀಯದ ಮೂಲ ತತ್ವವಾಗಿ ಬದಲಾಗಿದೆ ಎಂದು ಸೋನಿಯಾ ಅಸಮಾಧಾನ ವ್ಯಕ್ತಪಡಿಸಿದರು. 

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣ ಅರ್ಪಿಸಿದ್ದು, ಅವರರೆಲ್ಲರ ಕನಸಿನ ಭಾರತದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಸೋನಿಯಾ ಹೇಳಿದರು.