ವಿತರಕರ ಕಮಿಷನ್ ಅನ್ನು ಪರಿಷ್ಕರಿಸುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಜನವರಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದರು
ನವದೆಹಲಿ(ಏ.11): ತೈಲ ಬಳಕೆ ಇಳಿಕೆ ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮೇ 14ರಿಂದ ದೇಶಾದ್ಯಂತ ಭಾನುವಾರದಂದು ಪೆಟ್ರೋಲ್ ಬಂಕ್ ಸೇವೆ ಸ್ಥಗಿತಗೊಳಿಸಲು ತೈಲ ಮಾರಾಟಗಾರರ ಒಕ್ಕೂಟ ನಿರ್ಧರಿಸಿದೆ. ಇದೇ ವೇಳೆ ತೈಲ ಕಂಪನಿಗಳು ವಿತರಕರ ಕಮಿಷನ್ ಹೆಚ್ಚಳ ಮಾಡದೇ ಇರುವುದನ್ನು ವಿರೋಸಿ ಪೆಟ್ರೋಲ್ ಪಂಪ್ ಮಾಲೀಕರು ಮೇ 10ರಂದು ಬಂಕ್‌ಗಳನ್ನು ಮುಚ್ಚಿ ‘ಖರೀದಿ ರಹಿತ ದಿನ’ ಆಚರಿಸಲಿದ್ದಾರೆ.
ವಿತರಕರ ಕಮಿಷನ್ ಅನ್ನು ಪರಿಷ್ಕರಿಸುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಜನವರಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದರು. ಆದರೆ, ಇದುವರೆಗೂ ಕಮಿಷನ್ ಹೆಚ್ಚಳ ಆದೇಶ ಹೊರಬಿದ್ದಿಲ್ಲ. ಹೀಗಾಗಿ ಮೇ 14ರಿಂದ ಪ್ರತಿ ಭಾನುವಾರ ವಾರದ ರಜೆ ಪಡೆಯುವುದಾಗಿ ಸಂಘದ ಅಧ್ಯಕ್ಷ ರವಿ ಶಿಂಧೆ ಎಚ್ಚರಿಕೆ ನೀಡಿದ್ದಾರೆ.
