ಅತ್ಯಾಚಾರಿಗಳು, ಕೊಲೆಗಾರರು ಮತ್ತು ಡಕಾಯಿತರು ಇನ್ನು ಮುಂದೆ ನಿಯಮಿತ ಪೆರೋಲ್‌ಗೆ ಅರ್ಹರಲ್ಲ

ಮುಂಬೈ (ಸೆ.1): ಜೈಲು ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರಿಗಳು, ಕೊಲೆಗಾರರು ಮತ್ತು ಡಕಾಯಿತರು ಇನ್ನು ಮುಂದೆ ನಿಯಮಿತ ಪೆರೋಲ್‌ಗೆ ಅರ್ಹರಲ್ಲ. ಈ ಬಗ್ಗೆ ಮಹಾರಾಷ್ಟ್ರದ ಜೈಲು ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ನಾಸಿಕ್‌ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಜ್ಜದ್‌ ಮೊಗುಲ್‌ ಎಂಬಾತನಿಗೆ ಪರೋಲ್‌ ನೀಡಿದ್ದು ವಿವಾದಕ್ಕೆ ಕಾರಣವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪರಿಷ್ಕೃತ ನಿಯಮ ಪ್ರಕಾರ ಪರೋಲ್‌ಗಾಗಿ ಮನವಿ ಸಲ್ಲಿಸಿದ ವ್ಯಕ್ತಿ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಲ್ಲಿಸಿದ್ದ ಮನವಿ ವಿಚಾರಣೆಗೆ ಬಾಕಿ ಇದ್ದರೆ ಅಥವಾ ಜಾಮೀನು ನಿರಾಕರಿಸಲಾಗಿದ್ದರೆ ಅವರಿಗೆ ಪರೋಲ್‌ ನೀಡಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.