ಪೊಲೀಸ್ ಇಲಾಖೆ ಮೂಲಕ  ರಾಜ್ಯ ಸರ್ಕಾರ ಗೂಂಡಾ ಸಂಸ್ಕೃತಿ ನಡೆಸಿ ವಸೂಲಿ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸ್ ಇಲಾಖೆ ಮೇಲೆ ಯಾರಿಗೂ ಭಯವಿಲ್ಲದಂತಾಗಿದೆ ಎಂದು  ಪೊಲೀಸ್ ಇಲಾಖೆ‌ ಮತ್ತು ಗೃಹ ಸಚಿವರ ವಿರುದ್ದ  ಕುಮಾರಸ್ವಾಮಿ‌ ಕಿಡಿಕಾರಿದ್ದಾರೆ.

ಬೆಂಗಳೂರು (ಡಿ. 26): ಪೊಲೀಸ್ ಇಲಾಖೆ ಮೂಲಕ ರಾಜ್ಯ ಸರ್ಕಾರ ಗೂಂಡಾ ಸಂಸ್ಕೃತಿ ನಡೆಸಿ ವಸೂಲಿ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸ್ ಇಲಾಖೆ ಮೇಲೆ ಯಾರಿಗೂ ಭಯವಿಲ್ಲದಂತಾಗಿದೆ ಎಂದು ಪೊಲೀಸ್ ಇಲಾಖೆ‌ ಮತ್ತು ಗೃಹ ಸಚಿವರ ವಿರುದ್ದ ಕುಮಾರಸ್ವಾಮಿ‌ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಪೊಲೀಸ್ ಪೋಸ್ಟಿಂಗ್ ಹೆಸರಲ್ಲಿ ಹಣ ಮಾಡುವ ಧಂಧೆ ಮಾಡುತ್ತಿದೆ. ಇದರಿಂದಾಗಿ ಪ್ರಾಮಾಣಿಕರಿಗೆ ಮತ್ತು ನಿಪಕ್ಷವಾಗಿ ಕಾರ್ಯ ನಿರ್ವಹಿಸುವವರಿಗೆ ಅವಕಾಶ ಸಿಗುತ್ತಿಲ್ಲ.ನಿನ್ನೆ ಮೊನ್ನೆ ನಡೆದ ಜೆಡಿಎಸ್ ಕಾರ್ಯಕರ್ತರ ಹತ್ಯೆ ನೋಡಿದರೆ ಜಿಲ್ಲೆಯಲ್ಲಿ ಪೊಲೀಸ್ ಏನ್ ಮಾಡುತ್ತಿದೆ ಎಂಬ ಸಂಶಯ ಮೂಡುತ್ತಿದೆ. ರಾಜ್ಯಾದ್ಯಂತ ಕೊಲೆ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಗೃಹ ಇಲಾಖೆ ಕೆಲಸಕ್ಕೆ ಬಾರದ ಕೆಂಪಯ್ಯನನ್ನು ಇಟ್ಟುಕೊಂಡು ಕಾಲಹರಣ ಮಾಡುತ್ತಿದೆ. ಇದರ ಜೊತೆಗೆ ಯಾವುದೋ ಡಿಜಿಗೆ ಅವಧಿ ವಿಸ್ತರಣೆ ಮಾಡಿ ವಸೂಲಿ ದಂಧೆ ನಡೆಸಲು ಮುಂದಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕು. ಗೃಹ ಇಲಾಖೆಯಿಂದ ಕೆಂಪಯ್ಯ ಮತ್ತು ಅವಧಿ ವಿಸ್ತರಣೆ ಮಾಡಿರುವ ಡಿಜಿಯನ್ನು ಕಿತ್ತೆಸಯಬೇಕು. ಮದ್ದೂರು ಘಟನೆಯಲ್ಲಿ ಅಮಾಯಕರ ಬಲಿಯಾಗಿದೆ. ಈ ಕೂಡಲೇ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು. ಕೊಲೆ ಅರೋಪಿಗಳಿಗೆ ಕಾಂಗ್ರೆಸ್ ಸರ್ಕಾರವಾಗಲಿ, ಮಂತ್ರಿಗಳಾಗಲಿ ರಕ್ಷಣೆ ನೀಡಿದರೆ ಪರಿಣಾಮ ನೆಟ್ಟಗಿರಲ್ಲ. ಈ ಪ್ರಕರಣದಲ್ಲಿ ರಾಜಕೀಯ ಬೆರಸಬಾರದು. ಬಿಜೆಪಿಯವರ ರೀತಿ ನಾನು‌ ಆಕ್ಸಿಂಡೆಟ್ ಆದವರನ್ನು ಕೊಲೆಗೈದರೆಂದು ಹೋರಾಟ ಮಾಡಿವುದಿಲ್ಲ. ನಿಜವಾದ ಕಾರ್ಯಕರ್ತರನ ಪರವಾಗಿ ಹೋರಾಟ ಮಾಡ್ತಿನಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.