ಈಗ ನಾನು ನೀಡುತ್ತಿರುವ ರಾಜಿನಾಮೆ ನೋವು ಮತ್ತು ಸ್ವಾಭಿಮಾನ ಎರಡೂ ಸೇರಿದ ನಿರ್ಧಾರವಾಗಿದ್ದು, ಯಾರಿಂದಲೂ ರಾಜಿನಾಮೆ ತಡೆಯಲಾಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ನಂಜನಗೂಡು ಶಾಸಕ ವಿ. ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.

ಮೈಸೂರು (ಅ.14): ಈಗ ನಾನು ನೀಡುತ್ತಿರುವ ರಾಜಿನಾಮೆ ನೋವು ಮತ್ತು ಸ್ವಾಭಿಮಾನ ಎರಡೂ ಸೇರಿದ ನಿರ್ಧಾರವಾಗಿದ್ದು, ಯಾರಿಂದಲೂ ರಾಜಿನಾಮೆ ತಡೆಯಲಾಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ನಂಜನಗೂಡು ಶಾಸಕ ವಿ. ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸ್ವಾಭಿಮಾನಕ್ಕೆ ಧಕ್ಕೆ ಬಂದ ಜಾಗದಲ್ಲಿ ಇರಬೇಡಿ ಎಂದಿದ್ದರು. ಅವರ ಹಿತವಚನ ಕೂಡ ನನ್ನ ರಾಜಿನಾಮೆಗೆ ಕಾರಣವಾಗಿದೆ. ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜಿನಾಮೆ ನೀಡಲು ನಿರ್ಧರಿಸಿರುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸದ್ಯದಲ್ಲಿಯೇ ಕ್ಷೇತ್ರದ ಮತದಾರರ ಸಭೆ ನಡೆಸಿ ಚರ್ಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಇದೇ 17 ರಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸುತ್ತೇನೆ. ಮೊದಲು ಕಾಂಗ್ರೆಸ್‌ನಿಂದ ಹೊರಬಂದು, ಬಳಿಕ ನನ್ನ ಎಲ್ಲ ನೋವುಗಳನ್ನು ಹೇಳುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರ‌್ರಚನೆ ಮಾಡುವಾಗ ಪರಿಣಾಮಕಾರಿ ಮಂತ್ರಿಮಂಡಲ ರಚಿಸುತ್ತೇನೆ ಎಂದಿದ್ದರು. ಆದರೆ, ಅವರ ಪುನಾರ‌್ರಚನೆಯಲ್ಲಿ ಬೇರೆಯೇ ಉದ್ದೇಶವಿತ್ತು. ಅವರ ನೂತನ ಮಂತ್ರಿಮಂಡಲ ಇನ್ನೂ ದುರ್ಬಲವಾಯಿತು ಎಂದು ಕಿಡಿಕಾರಿದರು.