Asianet Suvarna News Asianet Suvarna News

ತಮಿಳುನಾಡಿಗೆ ನೀರು ಬಿಡಲು ಅಭ್ಯಂತರವಿಲ್ಲ: ಎಚ್‌ಡಿಡಿ

ತಮಿಳುನಾಡಿಗೆ ಕಾವೇರಿ ನೀರು ಬಿಡಲು ನಮಗೆ ಯಾವ ಆಕ್ಷೇಪ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ. ತಮಿಳುನಾಡಿನ ಹೊಸೂರು ಸಮೀಪದ ಮನ್ನಮಂಗಳಂ‌ ಗ್ರಾಮದ ಕರಗತಮ್ಮ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 

No objection to release cauvery water: H D Deve gowda

ಮದ್ರಾಸ್ [ಜೂನ್ 18]  ತಮಿಳುನಾಡಿಗೆ ಕಾವೇರಿ ನೀರು ಬಿಡಲು ನಮಗೆ ಯಾವ ಆಕ್ಷೇಪ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ. ತಮಿಳುನಾಡಿನ ಹೊಸೂರು ಸಮೀಪದ ಮನ್ನಮಂಗಳಂ‌ ಗ್ರಾಮದ ಕರಗತಮ್ಮ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ವೇಳೆ ತಮಿಳುನಾಡು‌ ಸರ್ಕಾರದ ಕ್ರೀಡಾ ಸಚಿವ ಬಾಲಕೃಷ್ಣ ಬರಮಾಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದರು.

ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಾವೇರಿ ನದಿ ನೀರು ಹಂಚಿಕೆ ವಿವಾದ 100 ವರ್ಷಗಳ ಹಿಂದಿನಿಂದ ನಡೆಯುತ್ತದೆ. ಕರ್ನಾಟಕಕ್ಕಿಂತಲೂ ತಮಿಳುನಾಡಿನಲ್ಲಿ ಕಾವೇರಿ ಹೆಚ್ಚು ಹರಿವನ್ನ ಹೊಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಮಿತಿ ರಚನೆ ಕೇಂದ್ರ ಸರ್ಕಾರ ಇನ್ನು ಮುಂದಾಗಿಲ್ಲ. ಈ ವಿಚಾರವಾಗಿ ಸುದೀರ್ಘ ಹೋರಾಟ ನಡೆಯುತ್ತಿದ್ದು, ಸದ್ಯ ಈಗ ಅಂತಿಮ ಸ್ವರೂಪವನ್ನು ತೆಗೆದುಕೊಂಡಿದೆ. ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರ ರಚನೆ ಮಾಡಿರುವ ಸಮಿತಿಗಳು ಇನ್ನು ಜಾರಿಗೆ ಬಂದಿಲ್ಲ ಎಂದರು.

ಇನ್ನು ಪ್ರತಿ ಹತ್ತು ದಿನಗಳಿಗೊಮ್ಮೆ ಜಲಾಶಯಗಳ ನೀರಿನ ಅಳತೆ ಮಾಡುವುದು ಹಾಗೂ ಸಮಿತಿಯವರು ಸೂಚಿಸುವಂತಹ ಬೆಳೆಗಳನ್ನು ರೈತರು ಬೆಳೆಯುವುದು ಕಷ್ಟ.‌ ಈ ಭಾರಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿರುವ ಹಿನ್ನಲೆ ಈ ರೀತಿ ನಡೆಯುತ್ತದೆ ಎಂದು ತಿಳಿಸಿದರು.

ಜಲಾಶಯಗಳಲ್ಲಿ ನೀರಿಲ್ಲದ ವೇಳೆ ಹತ್ತು ದಿನಗಳಿಗೊಮ್ಮೆ ನೀರಿನ ಅಳತೆ ಮಾಡಿ ನೀರು ಬಿಡುವುದು ಅವೈಜ್ಞಾನಿಕ ವಿಚಾರವಾಗಿದ್ದು, ಈ ಬಗ್ಗೆ ಎರಡು ರಾಜ್ಯಗಳ ಸರ್ಕಾರ ಒಂದು ಒಮ್ಮತದ ತಿರ್ಮಾನ ಕೈಗೊಳ್ಳುವ ಅವಶ್ಯಕತೆ ಇದೇ. ಈ ಬಗ್ಗೆ ಕಮಲಾಹಸನ್ ಸಹ ಮುಖ್ಯ ಮಂತ್ರಿ ಕುಮಾರಸ್ವಾಮಿ ಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದರು.

Follow Us:
Download App:
  • android
  • ios