ವಸತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ?

No need To Have Nationalised Bank Account For Vasathi Yojana
Highlights

ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳು ಗ್ರಾಮೀಣ ವಿಕಾಸ್‌ ಬ್ಯಾಂಕ್‌ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆ ತೆರೆಯಬೇಕು ಎಂಬ ನಿಯಮವನ್ನು ಬದಲಿಸಿ, ಸಹಕಾರಿ ಸಂಘಗಳಲ್ಲೂ ಖಾತೆ ತೆರೆಯಲು ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳೂರು :  ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳು ಗ್ರಾಮೀಣ ವಿಕಾಸ್‌ ಬ್ಯಾಂಕ್‌ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆ ತೆರೆಯಬೇಕು ಎಂಬ ನಿಯಮವನ್ನು ಬದಲಿಸಿ, ಸಹಕಾರಿ ಸಂಘಗಳಲ್ಲೂ ಖಾತೆ ತೆರೆಯಲು ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ವಸತಿ ಯೋಜನೆಯ ಸವಲತ್ತು ಪಡೆಯಬೇಕಾದರೆ ಕರ್ನಾಟಕ ಗ್ರಾಮೀಣ ವಿಕಾಸ್‌ ಬ್ಯಾಂಕ್‌ ಅಥವಾ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಇರಬೇಕು ಎಂಬ ನಿಯಮ ಇದೆ. ಆದರೆ ಗ್ರಾಮೀಣ ಪ್ರದೇಶದ ಬಡವರಿಗೆ ಬ್ಯಾಂಕ್‌ ಇರುವಲ್ಲಿಗೆ ತೆರಳಿ ಖಾತೆ ತೆರೆಯಲು ಕಷ್ಟವಾಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಸಹಕಾರಿ ಸಂಘಗಳಲ್ಲಿ ವಸತಿ ಫಲಾನುಭವಿಗಳು ಖಾತೆ ತೆರೆಯಲು ಆಸ್ಪದ ನೀಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಸತಿ ಯೋಜನೆ ಗ್ರಾಮೀಣದಲ್ಲಿ .32 ಸಾವಿರ ಎಂದು ನಿಗದಿಪಡಿಸಲಾಗಿದೆ. ಈ ಮೊತ್ತವನ್ನು ಹೆಚ್ಚಿಸಲು ಹೆಚ್ಚಳಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕರ್ನಾಟಕ ಹೌಸಿಂಗ್‌ ಬೋರ್ಡ್‌ನಿಂದ ಬಡವರಿಗೆ ಜಿ ಪ್ಲಸ್‌​​​​-3 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಜಿ ಪ್ಲಸ್‌ 14 ಮಾದರಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.

ಸರ್ಕಾರದ ಯಾವುದೇ ವಸತಿ ಯೋಜನೆಯ ಅರ್ಜಿ ಇಲಾಖೆಗೆ ರವಾನೆಯಾದ ಒಂದು ವಾರದೊಳಗೆ ಪಟ್ಟಿಗೆ ಅನುಮೋದನೆ ನೀಡಬೇಕು. ಕೂಡಲೇ ಹಂಚಿಕೆಯ ಪತ್ರವನ್ನು ಕಳುಹಿಸಬೇಕು. ಈ ವೇಳೆ ಮನೆ ನಿರ್ಮಿಸಲು ಖಾತೆ ತೆರೆಯಲು ಕಷ್ಟಪಡುವವರಿದ್ದಾರೆ. ಇದರಿಂದಾಗಿಯೇ ಲಕ್ಷದಷ್ಟುಮನೆಗಳು ನಿರ್ಮಾಣಕ್ಕೆ ಬಾಕಿ ಇರುವುದು ಪತ್ತೆಯಾಗಿದೆ. ಈ ವಿಳಂಬವನ್ನು ಹೋಗಲಾಡಿಸಲು ಸಹಕಾರಿ ಸಂಘಗಳಲ್ಲೂ ಖಾತೆ ತೆರೆದು ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

loader