ನವದೆಹಲಿ(ಅ.06): ಇತ್ತೀಚೆಗಷ್ಟೇ ಉಗ್ರರ ಮೇಲೆ ಸರ್ಜಿಕಲ್ ದಾಳಿಯನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಸೇನೆ, ಭಯೋತ್ಪಾದಕರ ಮಾಸ್ಟರ್'ಮೈಂಡ್'ಗಳಾದ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂ ಮೇಲೆ ಕಣ್ಣಿಟ್ಟಿದೆ ಎಂದು ಯೋಗ ಗುರು ಬಾಬಾ ರಾಮ್'ದೇವ್ ಹೇಳಿದ್ದಾರೆ.

ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರಾಮ್'ದೇವ್, ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.

ಭಾರತದ ಮುಂದಿನ ಗುರಿಯೇನಿದ್ದರೂ ಉಗ್ರ ಸಂಘಟನೆಯ ಮುಖ್ಯಸ್ಥರಾದ ಹಫೀಜ್ ಸಯೀದ್ ಮತ್ತು ದಾವೂದ್. ಇವರಿಬ್ಬರನ್ನು ಜೀವಂತವಾಗಿ ಹಿಡಿಯುವ ಅವಶ್ಯಕತೆಯಿಲ್ಲ. ಇವರಿಗೆ ಮೋಕ್ಷ(ಮುಕ್ತಿ) ನೀಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರು ಚಿರಕಾಲ ಉಳಿಯಲಿದೆ ಎಂದು ರಾಮ್'ದೇವ್ ಹೇಳಿದ್ದಾರೆ.

ಸರ್ಜಿಕಲ್ ದಾಳಿಯ ವಿಡಿಯೋವನ್ನು ಬಿಡುಗಡೆಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಯೋಗ ಗುರು ಅಭಿಪ್ರಾಯಪಟ್ಟಿದ್ದಾರೆ.