ಬೆಂಗಳೂರು(ಜು. 30)  ಟಿಪ್ಪು ಜಯಂತಿಯನ್ನು ಬಿಜೆಪಿ ರದ್ದು ಮಾಡುತ್ತದೆ ಎಂದು ಗೊತ್ತಿತ್ತು.  ಆದರೆ ಇಷ್ಟು ಬೇಗ ಮಾಡಲಿದೆ ಎಂದು ಗೊತ್ತಿರಲಿಲ್ಲ. ರದ್ದು ಪಡಿಸಬೇಕಾದರೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಆಗಬೇಕು.  ಹೇಗೆ ರದ್ದು ಪಡಿಸಿದರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಹೇಗೆ ನಿಷೇಧ ಮಾಡಿದ್ದೀರಿ ಎಂದು ರೋಷನ್‌ ಬೇಗ್ ಕೇಳಬೇಕು. ಕಾಂಗ್ರೆಸ್ ಬಿಟ್ಟು ಬಿಜೆಪಿ ಹೋಗ್ತಿದ್ದಾರೆ. ಎಲ್ಲಾ ಧರ್ಮದವರು ಟಿಪ್ಪು ಜಯಂತಿ ಆಚರಿಸಿಕೊಂಡು ಬಂದಿದ್ದಾರೆ. ಎಲ್ಲಾ ಕಡೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಇನ್ನೂ ಮುಂದೆ ಮತ್ತಷ್ಟು ಜೋರಾಗಿ ಆಚರಿಸುತ್ತೇವೆ ಎಂದರು.

ಟಿಪ್ಪು ಜಯಂತಿ ಆಚರಣೆ ಇಲ್ಲ

ಟಿಪ್ಪು ಜಯಂತಿ ಆಚರಣೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.  ನಾವು ಆಚರಣೆ ಮಾಡೇ ಮಾಡ್ತೆವೆ ಎಂದು ಜಮೀರ್ ಅಹಮದ್ ಖಾನ್ ಗುಡುಗಿದ್ದಾರೆ.