ಪ್ರವಾಸಿಗರ ಪ್ರಾಣಕ್ಕೆ ಅಪಾಯವಿರುವ ಬೆಟ್ಟ, ನದಿ ಹಾಗೂ ಜಲಪಾತಗಳಂತಹ ಸ್ಥಳಗಳಲ್ಲಿ ಇನ್ಮುಂದೆ ಸೆಲ್ಫೀ ತೆಗೆಯುವುದನ್ನು ನಿಷೇಧಿಸಿ ಪ್ರವಾಸೋದ್ಯಮ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು (ಡಿ.29): ಮುಂಬರುವ ರಜೆಗಳಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಇರಾದೆಯಿದೆಯೇ? ಹೌದಾದಲ್ಲಿ ಈ ಸೂಚನೆಯನ್ನು ಗಮನದಲ್ಲಿಟ್ಟುಕೊಳ್ಳಿ.

ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫೀ ತೆಗೆಯುವುದನ್ನು ಇನ್ಮುಂದೆ ನಿಷೇಧಿಸಿದೆ.

ಪ್ರವಾಸಿಗರ ಪ್ರಾಣಕ್ಕೆ ಅಪಾಯವಿರುವ ಬೆಟ್ಟ, ನದಿ ಹಾಗೂ ಜಲಪಾತಗಳಂತಹ ಸ್ಥಳಗಳಲ್ಲಿ ಇನ್ಮುಂದೆ ಸೆಲ್ಫೀ ತೆಗೆಯುವುದನ್ನು ನಿಷೇಧಿಸಿ ಪ್ರವಾಸೋದ್ಯಮ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇಂತಹ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವುದಾಗಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಈ ಮುಂಚೆ ಹೇಳಿದ್ದರು.

ಆದುದರಿಂದ ಇನ್ಮುಂದೆ ನಂದಿಹಿಲ್ಸ್, ಸವಣದುರ್ಗ ಬೆಟ್ಟ ಮುಂತಾದ 50 ಸ್ಥಳಗಳಲ್ಲಿ ಅಪಾಯಕಾರಿ ಪಾಯಿಂಟ್'ಗಳಲ್ಲಿ ಸೆಲ್ಫೀ ತೆಗೆಯುವ ಹಾಗಿಲ್ಲ.