ಕಾಶ್ಮೀರದಲ್ಲಿ ಯೋಧನೊಬ್ಬನನ್ನು ಕಿಡ್ನಾಪ್ ಮಾಡಿ ಹತ್ಯೆಗೈದಿರುವುದಕ್ಕೆ ಅಖಿಲೇಶ್ ಯಾದವ್ ಸಂತಾಪ ಸೂಚಿಸುತ್ತಾ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಯೋಧರ ಸಾವಿಗೆ ರಾಜಕೀಯದ ಲೇಪ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ಲಕ್ನೋ (ಮೇ.10): ಕಾಶ್ಮೀರದಲ್ಲಿ ಯೋಧನೊಬ್ಬನನ್ನು ಕಿಡ್ನಾಪ್ ಮಾಡಿ ಹತ್ಯೆಗೈದಿರುವುದಕ್ಕೆ ಅಖಿಲೇಶ್ ಯಾದವ್ ಸಂತಾಪ ಸೂಚಿಸುತ್ತಾ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಯೋಧರ ಸಾವಿಗೆ ರಾಜಕೀಯದ ಲೇಪ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ಈಗ ನಡೆದಿರುವ ಘಟನೆಗೆ ಉತ್ತರವಿಲ್ಲ. ಕೆಲವರ ತಲೆ ಬ್ಲಾಂಕ್ ಆಗಿದೆ. ಯಾಕೆ ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ? ನಮ್ಮ ಯೋಧರ ಶಿರಚ್ಚೇಧನ ನಡೆಯುತ್ತಿದ್ದರೂ ಯಾರೂ ಚಕಾರವೆತ್ತುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಹಾಗೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಗುಜರಾತ್ ನಲ್ಲಿ ಒಬ್ಬ ಯೋಧನಾದರೂ ಹುತಾತ್ಮರಾಗಿದ್ದಾರೆಯೇ? ಎಂದು ಮೋದಿಯವರಿಗೆ ಪರೋಕ್ಷವಾಗಿ ಟಾಂಗ್ ಹೊಡೆದಿದ್ದಾರೆ.
ಯೋಧರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ವಂದೇ ಮಾತರಂ ವಿಚಾರದಲ್ಲಿ ರಾಜಕೀಯ ನಡೆಸುತ್ತಾರೆ. ಇದರ ಬಗ್ಗೆ ಮಾತನಾಡುವುದಿಲ್ಲ. ಮಾತೆತ್ತಿದರೆ ನೀವು ಹಿಂದುಗಳಲ್ಲ ಎಂದು ಅವರು ಹೇಳುತ್ತಾರೆ. ಅವರಿಗೆ ಇವೆಲ್ಲಾ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
