ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಗ್ಗೆ ಈ ವ್ಯಕ್ತಿಗೆ ಕಾಡುತ್ತಿದೆ ವಿಪರೀತ ಭಯ

First Published 26, Feb 2018, 7:23 AM IST
No Jokes on Amit Shah out of fear Says Cyrus
Highlights

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಬಗ್ಗೆ ಭಯ ಇದ್ದು, ಹೀಗಾಗಿ ಅವರ ಕುರಿತು ಯಾವುದೇ ಜೋಕ್‌ ಮಾಡುತ್ತಿಲ್ಲ’ ಎಂದು ದೇಶದ ಖ್ಯಾತ ಹಾಸ್ಯ ಕಲಾವಿದ ಸೈರಸ್‌ ಬ್ರೋಚಾ ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿ ಈಗ ಸೋವಿಯತ್‌ ಒಕ್ಕೂಟದಲ್ಲಿ ಇದ್ದಂಥ ವಾತಾವರಣವಿದೆ ಎಂದೂ ಆರೋಪಿಸಿದ್ದಾರೆ.

ಕೋಲ್ಕತಾ : ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಬಗ್ಗೆ ಭಯ ಇದ್ದು, ಹೀಗಾಗಿ ಅವರ ಕುರಿತು ಯಾವುದೇ ಜೋಕ್‌ ಮಾಡುತ್ತಿಲ್ಲ’ ಎಂದು ದೇಶದ ಖ್ಯಾತ ಹಾಸ್ಯ ಕಲಾವಿದ ಸೈರಸ್‌ ಬ್ರೋಚಾ ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿ ಈಗ ಸೋವಿಯತ್‌ ಒಕ್ಕೂಟದಲ್ಲಿ ಇದ್ದಂಥ ವಾತಾವರಣವಿದೆ ಎಂದೂ ಆರೋಪಿಸಿದ್ದಾರೆ.

ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಜೀವಂತವಿದ್ದಾಗ ಅವರ ಬಗ್ಗೆ ಕಲಾವಿದರು ಜೋಕ್‌ ಮಾಡಲು ಹೆದರುತ್ತಿದ್ದರು. ಮಹಾತ್ಮಾ ಗಾಂಧೀಜಿ ಕುರಿತೂ ಯಾರೂ ಜೋಕ್‌ ಮಾಡುತ್ತಿರಲಿಲ್ಲ. ಈಗ ಅಮಿತ್‌ ಶಾ ಅವರಿಗೆ ಹೆದರುತ್ತಿದ್ದೇವೆ’ ಎಂದರು.

‘ಈ ಹಿಂದೆ ಜಯಲಲಿತಾ ಬಗ್ಗೆ ಜೋಕ್‌ ಮಾಡಿದ್ದಕ್ಕೆ ನನಗೆ 3 ವರ್ಷ ಚೆನ್ನೈಗೆ ಕಾಲಿಡಲು ಆಗಿರಲಿಲ್ಲ’ ಎಂದೂ ಮೆಲುಕು ಹಾಕಿದ ಸೈರಸ್‌, ‘ಏನೇ ಇದ್ದರೂ ಕೊನೆಗೆ ಬದುಕುವುದು ಮಹತ್ವದ್ದು. ನಮಗೆ ಈಗ ಸೋವಿಯತ್‌ ಒಕ್ಕೂಟದಲ್ಲಿ ಇದ್ದಂಥ ಅನುಭವವಾಗುತ್ತಿದೆ’ ಎಂದು ಮಾರ್ಮಿಕವಾಗಿ ನುರಿದರು.

loader