ಬೀಜಿಂಗ್ (ಅ.10): ಭಾರತ ಮತ್ತು ಪಾಕ್ ನಡುವೆ ಬ್ರಹ್ಮಪುತ್ರ ಉಪನದಿ ತಡೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಜಲ ಸಮರಕ್ಕೆ ಚೀನಾ ಬೆಂಬಲ ನೀಡುತ್ತದೆ ಎನ್ನುವ ಮಾತನ್ನು ಚೀನಾ ತಳ್ಳಿ ಹಾಕಿದೆ.

ಬೀಜಿಂಗ್ (ಅ.10): ಭಾರತ ಮತ್ತು ಪಾಕ್ ನಡುವೆ ಬ್ರಹ್ಮಪುತ್ರ ಉಪನದಿ ತಡೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಜಲ ಸಮರಕ್ಕೆ ಚೀನಾ ಬೆಂಬಲ ನೀಡುತ್ತದೆ ಎನ್ನುವ ಮಾತನ್ನು ಚೀನಾ ತಳ್ಳಿ ಹಾಕಿದೆ.

ನೀರು ಹಂಚಿಕೆ ಸಂಬಂಧಪಟ್ಟಂತೆ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಬಹುಪಕ್ಷೀಯ ಸಹಕಾರ ಒಕ್ಕೂಟಕ್ಕೆ ಸೇರಲು ಚೀನಾ ಸಿದ್ಧವಿದೆ ಎಂದು ಚೀನಾ ಮಾಧ್ಯಮ ಹೇಳಿದೆ.

ಭಾರತ ಮತ್ತು ಚೀನಾದ ಸಂಬಂಧವು ಕಾಲ್ಪನಿಕ ಜಲ ಸಮರದ ಮೇಲೆ ಪ್ರಭಾವ ಬೀರಬಾರದು. ಬ್ರಹ್ಮಪುತ್ರ ನದಿ ನೀರನ್ನು ಚೀನಾ ಅಷ್ಟಾಗಿ ಬಳಸುವುದಿಲ್ಲ. ಹಾಗಾಗಿ ಭಾರತ-ಪಾಕ್ ನಡುವೆ ಮಧ್ಯಪ್ರವೇಶಿಸುವುದಿಲ್ಲವೆಂದು ಚೀನಾ ಸ್ಪಷ್ಟಪಡಿಸಿದೆ.

ಭಾರತದ ಜೊತೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಮಾಡಿಕೊಳ್ಳದ ಚೀನಾಗೆ ಇದು ಮಹತ್ತರವಾದ ಪ್ರಸ್ತಾವನೆಯಾಗಿದೆ ಎಂದು ಚೀನಾ ಹೇಳಿದೆ.