ನವದೆಹಲಿ[ನ.26]  ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸಿದ್ದು ಅಲ್ಲದೇ 1 ಮತ್ತು 2 ನೇ ತರಗತಿ  ಮಕ್ಕಳಿಗೆ ಈ ಸುದ್ದಿ ನಿಜಕ್ಕೂ ಸಂತಸ ತಂದಿದೆ.  1 ಮತ್ತು 2 ನೇ ತರಗತಿಯ ಮಕ್ಕಳಿಗೆ ಒಂದೂವರೆ ಕೆಜಿಯಷ್ಟು ಮಾತ್ರ ಬ್ಯಾಗಿನ ತೂಕವಿರಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ದೇಶಿಸಿದೆ.

1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ. 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಗಣಿತ ಹಾಗೂ ಭಾಷಾ ವಿಷಯಗಳನ್ನು ಮಾತ್ರ ನಿಗದಿ ಮಾಡಬೇಕು. ಹಾಗೂ, 3 ಮತ್ತು 4 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಗಣಿತ, ಭಾಷೆ ಹಾಗೂ ಇವಿಎಸ್‌ ಭಾಷೆಗಳನ್ನು ಮಾತ್ರ ನಿಗದಿ ಮಾಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿದೆ.

ಇದೇ ರೀತಿ, 3 ಮತ್ತು 5 ನೇ ತರಗತಿಯ ಮಕ್ಕಳಿಗೆ 2 ರಿಂದ 3 ಕೆಜಿ, 6 ರಿಂದ 7 ನೇ ತರಗತಿಯ ಮಕ್ಕಳಿಗೆ 4 ಕೆಜಿ, 8 ಮತ್ತು 9 ನೇ ತರಗತಿಯ ಮಕ್ಕಳಿಗೆ ನಾಲ್ಕೂವರೆ ಕೆಜಿ ಹಾಗೂ 10 ನೇ ತರಗತಿಯ ಮಕ್ಕಳಿಗೆ ಐದು ಕೆಜಿ ಬ್ಯಾಗ್ ತೂಕ ಮೀರುವಂತಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾರ್ಗದರ್ಶಿ ಸೂತ್ರದಲ್ಲಿ ಆದೇಶ ಮಾಡಿದೆ.

ಒಟ್ಟಿನಲ್ಲಿ ಬಾಲ್ಯದಲ್ಲಿಯೇ ತೂಕ ಹೊತ್ತು ಹೊತ್ತು ಗೂನು ಬೆನ್ನು ಮಾಡಿಕೊಳ್ಳುತ್ತಿದ್ದ ಮಕ್ಕಳ ನೆರವಿಗೆ ಅಂತಿಮವಾಗಿ ಕೇಂದ್ರ ಸರಕಾರವೇ ಬಂದಿದೆ. ಮೇಲ್ನೋಟಕ್ಕೆ ನಮಗೆ ಏನೂ ಅನ್ನಿಸದೆ ಇದ್ದರೂ ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಕಳೆಯಲು ಈ ಆದೇಶ ನೆರವಾಗುವುದರಲ್ಲಿ ಅನುಮಾನ ಇಲ್ಲ.