ಫ್ಯ್ಲಾಟ್‌'ಗಳಲ್ಲಿ ನಿರ್ವಹಣಾ ವೆಚ್ಚವಾಗಿ ಹೌಸಿಂಗ್ ಸೊಸೈಟಿಗಳು ವಿಧಿಸುವ ಮಾಸಿಕ ಶುಲ್ಕ 5,000 ರು.ಗಿಂತ ಕಡಿಮೆಯಿದ್ದಲ್ಲಿ ಮತ್ತು ವಾರ್ಷಿಕ 20 ಲಕ್ಷ ರು.ಗಿಂತ ಮೀರದ ವ್ಯವಹಾರ ನಡೆಸದಿದ್ದಲ್ಲಿ, ಜಿಎಸ್‌'ಟಿ ಪಾವತಿಸುವ ಅಗತ್ಯವಿಲ್ಲವೆಂದೂ ಸ್ಪಷ್ಟಪಡಿಸಲಾಗಿದೆ.

ನವದೆಹಲಿ: ಹಳೆಯ ಚಿನ್ನಾಭರಣ ಮತ್ತು ಹಳೆಯ ವಾಹನಗಳ ಮಾರಾಟಕ್ಕೆ ಯಾವುದೇ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ. ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾರ ಬುಧವಾರದ ಹೇಳಿಕೆಗೆ ಇಲಾಖೆ ಸ್ಪಷ್ಟನೆ ನೀಡಿದೆ. ಆಭರಣ ವ್ಯಾಪಾರಿಗೆ ವ್ಯಕ್ತಿಯು ಹಳೆಯ ಚಿನ್ನ ಮಾರಾಟ ಮಾಡುವುದು ಕಾಯ್ದೆಯ ಕಲಂ 9(4)ರ ವ್ಯಾಪ್ತಿಗೆ ಬರುವುದಿಲ್ಲ, ಹೀಗಾಗಿ ತೆರಿಗೆ ಪಾವತಿಸಬೇಕಾಗಿಲ್ಲ. ಇದೇ ನೀತಿ ಹಳೆ ಕಾರು, ದ್ವಿಚಕ್ರ ವಾಹನಗಳ ಮಾರಾಟಕ್ಕೂ ಅನ್ವಯವಾಗುತ್ತದೆ. ಅಲ್ಲದೆ, ಫ್ಯ್ಲಾಟ್‌'ಗಳಲ್ಲಿ ನಿರ್ವಹಣಾ ವೆಚ್ಚವಾಗಿ ಹೌಸಿಂಗ್ ಸೊಸೈಟಿಗಳು ವಿಧಿಸುವ ಮಾಸಿಕ ಶುಲ್ಕ 5,000 ರು.ಗಿಂತ ಕಡಿಮೆಯಿದ್ದಲ್ಲಿ ಮತ್ತು ವಾರ್ಷಿಕ 20 ಲಕ್ಷ ರು.ಗಿಂತ ಮೀರದ ವ್ಯವಹಾರ ನಡೆಸದಿದ್ದಲ್ಲಿ, ಜಿಎಸ್‌'ಟಿ ಪಾವತಿಸುವ ಅಗತ್ಯವಿಲ್ಲವೆಂದೂ ಸ್ಪಷ್ಟಪಡಿಸಲಾಗಿದೆ.

epaper.kannadaprabha.in