ಆದರೆ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್’ಗಳು ಕಾರ್ಯನಿರ್ವಹಿಸಲಿದೆ. ಸಂಜೆ 6ಗಂಟೆ ನಂತರ ಬಂಕ್ ಬಂದ್ ಆಗಲಿದೆ.
ಬೆಂಗಳೂರು (ನ.03): ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್, ಸರ್ಕಾರಿ ಸ್ವಾಮ್ಯದ 3 ತೈಲ ಕಂಪನಿಗಳಿಂದ ಇಂಧನ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಪೆಟ್ರೋಲ್ ಮತ್ತು ಡೀಸೆಲ್ ಸಿಗುವುದಿಲ್ಲ.
ಆದರೆ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್’ಗಳು ಕಾರ್ಯನಿರ್ವಹಿಸಲಿದೆ. ಸಂಜೆ 6ಗಂಟೆ ನಂತರ ಬಂಕ್ ಬಂದ್ ಆಗಲಿದೆ.
ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಡೀಲರ್ಸ್ ಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಮಧ್ಯರಾತ್ರಿಯೂ ಬಂಕ್ ಮುಂದೆ ಉದ್ದುದ್ದ ಕ್ಯೂ:
ಮುಷ್ಕರದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 2 ಗಂಟೆಯಾದರೂ ನೂರಾರು ವಾಹನ ಸವಾರರು ಪೆಟ್ರೋಲ್ ಬಂಕ್ಗಳ ಮುಂದೆ ಕ್ಯೂನಲ್ಲಿ ನಿಂತು ಪೆಟ್ರೋಲ್ ತುಂಬಿಸಿಕೊಂಡರು. ಅದರಲ್ಲೂ ಬೆಂಗಳೂರಿನ ಹಲವು ಬಂಕ್ಗಳಲ್ಲಿ ಇಡೀ ರಾತ್ರಿ ಜನಸಂದಣಿ ಕಂಡು ಬಂತು. ಇನ್ನೆರಡು ದಿನ ಇಂಧನ ಸಿಗುತ್ತೋ ಸಿಗಲ್ವೋ ಅನ್ನೋ ಭಯದಲ್ಲೇ ಖರೀದಿಸಿದರು.
