ವಿಮಾನದಲ್ಲಿ ಯಾರಾದರೂ ಅನುಚಿತವಾಗಿ ವರ್ತಿಸಿದರೆ ಅಂತವರಿಗೆ 3 ತಿಂಗಳು ವಿಮಾನ ಹಾರಾಟವನ್ನು ನಿಷೇಧಿಸಲಾಗುತ್ತದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ಅನುಚಿತವಾಗಿ ವರ್ತಿಸುವವರಿಗೆ ವಿಮಾನ ಪ್ರಯಾಣವನ್ನು ನಿಷೇಧಿಸಲಾಗುತ್ತದೆ.
ನವದೆಹಲಿ (ಸೆ.08): ವಿಮಾನದಲ್ಲಿ ಯಾರಾದರೂ ಅನುಚಿತವಾಗಿ ವರ್ತಿಸಿದರೆ ಅಂತವರಿಗೆ 3 ತಿಂಗಳು ವಿಮಾನ ಹಾರಾಟವನ್ನು ನಿಷೇಧಿಸಲಾಗುತ್ತದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ಅನುಚಿತವಾಗಿ ವರ್ತಿಸುವವರಿಗೆ ವಿಮಾನ ಪ್ರಯಾಣವನ್ನು ನಿಷೇಧಿಸಲಾಗುತ್ತದೆ.
ಈ ಮೂರು ವಿಧವಾದ ವರ್ತನೆಗಳನ್ನು ಅನುಚಿತವಾದ ವರ್ತನೆಗಳೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ತಕ್ಕಂತೆ ನಿಷೇಧದ ಕಾಲಾವಧಿಯನ್ನು ನಿರ್ಧರಿಸಲಾಗುತ್ತದೆ. 1. ಸಹ ಪ್ರಯಾಣಿಕರೊಂದಿಗೆ ಅಶಿಸ್ತಿನ ದೈಹಿಕ ಸಂಜ್ಞೆಗಳನ್ನು ಮಾಡಿದರೆ, ಮೌಖಿಕ ಕಿರುಕುಳ ನೀಡಿದರೆ, ಅಶಿಸ್ತಿನಿಂದ ವರ್ತಿಸಿದರೆ ಅಂತವರನ್ನು 3 ತಿಂಗಳು ನಿಷೇಧಿಸಲಾಗುತ್ತದೆ.
2. ಸಹ ಪ್ರಯಾಣಿಕರನ್ನು ದೈಹಿಕವಾಗಿ ನಿಂದಿಸಿದರೆ, ತಳ್ಳುವುದು, ಒದೆಯುವುದು, ಹೊಡೆಯುವುದು, ಸೂಕ್ತವಲ್ಲದ ಕಡೆ ಸ್ಪರ್ಶಿಸುವುದನ್ನು ಮಾಡಿದರೆ ಅಂತವರನ್ನು ಒಂದು ತಿಂಗಳು ನಿಷೇಧಿಸಲಾಗುತ್ತದೆ.
3. ಜೀವ ಬೆದರಿಕಾ ನಡೆವಳಿಕೆ, ದೌರ್ಜನ್ಯ, ವಿಮಾನ ಉಪಕರಣಗಳನ್ನು ಹಾನಿಗೊಳಿಸಿದರೆ ಅಂತವರಿಗೆ 2 ವರ್ಷ ನಿಷೇಧ ಹೇರಲಾಗುತ್ತದೆ. ಒಂದು ವೇಳೆ ತಪ್ಪನ್ನು ಪುನರಾವರ್ಸಿದರೆ ನಿಷೇಧದ ಕಾಲಾವಧಿಯನ್ನು ದ್ವಿಗುಣಗೊಳಿಸಲಾಗುತ್ತದೆ. ಮಂತ್ರಿಗಳು ಸೇರಿದಂತೆ ಎಲ್ಲರಿಗೂ ಈ ನಿಬಂಧನೆಗಳು ಅನ್ವಯವಾಗುತ್ತದೆ ಎಂದು ನಾಗರೀಕ ವಿಮಾನಯಾನ ಸಚಿವ ಎ ಜಿ ರಾಜು ಹೇಳಿದ್ದಾರೆ.
ನಿಷೇಧಕ್ಕೊಳಗಾದ ವ್ಯಕ್ತಿ ಬೇರೆ ಬೇರೆ ಹೆಸರಿನಿಂದ ಟಿಕೆಟ್ ಬುಕ್ ಮಾಡುವುದನ್ನು ತಪ್ಪಿಸಲು ಪಿಎನ್’ಆರ್ (Passenger Name Record) ಜೊತೆಗೆ ಯೂನಿಕ್ ಐಡಿ ಸಂಖ್ಯೆ (Unique ID Card Number ) ನೀಡಲಾಗುವುದು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.
