ರೋಹಿಂಗ್ಯಾ ಮುಸಲ್ಮಾನರನ್ನು ದೇಶಕ್ಕೆ ಸೇರಿಸಿಕೊಳ್ಳಲು ಮಯನ್ಮಾರ್ ಸಿದ್ದ: ಸಾನ್ ಸು ಕಿ
ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿದ್ದ ರೋಹಿಂಗ್ಯಾ ಮುಸಲ್ಮಾನರ ವಲಸೆ ವಿಚಾರಕ್ಕೆ ಸಂಬಂಧಿಸಿದಂತೆ ಕಡೆಗೂ ಮಯನ್ಮಾರ್ ಕೌನ್ಸಲರ್ ಔಂಗ್ ಸಾನ್ ಸು ಕಿ ಮೌನ ಮುರಿದಿದ್ದಾರೆ.
ನವದೆಹಲಿ (ಸೆ.19): ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿದ್ದ ರೋಹಿಂಗ್ಯಾ ಮುಸಲ್ಮಾನರ ವಲಸೆ ವಿಚಾರಕ್ಕೆ ಸಂಬಂಧಿಸಿದಂತೆ ಕಡೆಗೂ ಮಯನ್ಮಾರ್ ಕೌನ್ಸಲರ್ ಔಂಗ್ ಸಾನ್ ಸು ಕಿ ಮೌನ ಮುರಿದಿದ್ದಾರೆ.
ಜಗತ್ತಿನ ಬೇರೆ ಬೇರೆ ಕಡೆ ವಲಸೆ ಹೋಗಿರುವ ರೋಹಿಂಗ್ಯಾ ಮುಸಲ್ಮಾನರನ್ನು ಪರಿಶೀಲನಾ ಪ್ರಕ್ರಿಯೆ ಮೂಲಕ ದೇಶಕ್ಕೆ ಸೇರಿಸಿಕೊಳ್ಳುವುದಾಗಿ ಮಯನ್ಮಾರ್ ಹೇಳಿದೆ. ಭಾರತ ಕೂಡಾ ಇದಕ್ಕೆ ಒಪ್ಪಬೇಕಿದೆ ಎಂದಿದೆ. ಎಲ್ಲಿಯೂ ಸಲ್ಲದೇ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರನ್ನು ವಾಪಸ್ ದೇಶಕ್ಕೆ ಕರೆಸಿಕೊಳ್ಳಲಿದೆ. ಪರಿಶೀಲನಾ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಲಿದೆ.
ಧಾರ್ಮಿಕ ನಂಬಿಕೆಗಳು ಅಥವಾ ಜನಾಂಗೀಯ ಆಧಾರದ ಮೇಲೆ ಮಯನ್ಮಾರ್ ಒಡೆದು ಹೋಗುವುದನ್ನು ನಾವು ಬಯಸುವುದಿಲ್ಲ. ದ್ವೇಷ ಮತ್ತು ಭಯವೇ ಜಾಗತಿಕ ಸಮಸ್ಯೆಗೆ ಕಾರಣ ಎಂದು ನೋಬೆಲ್ ಪಾರಿತೋಷಕ ವಿಜೇತೆ ಔಂಗ್ ಸಾನ್ ಸು ಕಿ ಹೇಳಿದ್ದಾರೆ.
ಹಿಂಸಾಚಾರದಿಂದ ತೊಂದರೆ ಅನುಭವಿಸುತ್ತಿರುವ ರೋಹಿಂಗ್ಯಾಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ, ಪರಿಶೀಲನಾ ಪ್ರಕ್ರಿಯೆಯಿಂದ ಅವರನ್ನು ಪುನಃ ದೇಶಕ್ಕೆ ಕರೆಸಿಕೊಳ್ಳಲು ಮಯನ್ಮಾರ್ ಸದಾ ಸಿದ್ಧವಿದೆ ಎಂದಿದ್ದಾರೆ.