ದೇಶದಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದರ ಬಗ್ಗೆ ಅಧಿಕೃತ ಅಂದಾಜು ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟ ಪಡಿಸಿದ್ದಾರೆ.
ನವದೆಹಲಿ (ಡಿ.16): ದೇಶದಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದರ ಬಗ್ಗೆ ಅಧಿಕೃತ ಅಂದಾಜು ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟ ಪಡಿಸಿದ್ದಾರೆ.
ನವೆಂಬರ್ ೮ರಂದು ಹಳೆ ನೋಟು ಚಲಾವಣೆ ರದ್ದು ಮಾಡಿದ ನಂತರವಾಗಲೀ ಅಥವಾ ಅದಕ್ಕೂ ಮುನ್ನವಾಗಲೀ ಕಪ್ಪುಹಣ ಎಷ್ಟಿತ್ತೆಂಬುದರ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2014 ಏಪ್ರಿಲ್‌ನಿಂದ2016 ನವೆಂಬರ್ ಅವರೆಗೆ ಆದಾಯ ತೆರಿಗೆ ಇಲಾಖೆ 1356 ಶೋಧ ನಡೆಸಿದ್ದು, ₹31, 277 ಕೋಟಿ ಘೋಷಣೆ ಮಾಡದ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಇದೇ ವೇಳೆ ₹1364 ಕೋಟಿ ಬಚ್ಚಿಟ್ಟಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೇ 14044 ಸಮೀಕ್ಷೆಗಳನ್ನು ನಡೆಸಿ, ₹30492 ಕೋಟಿ ಅಕ್ರಮ ಆದಾಯವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಲೋಕಸಭಾ ಚುನಾವಣೆ ವೇಳೆ ಕಪ್ಪುಹಣವನ್ನೇ ತಮ್ಮ ಪ್ರಮುಖ ಪ್ರಚಾರ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ನರೇಂದ್ರ ಮೋದಿ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸು ತಂದರೆ ದೇಶದ ಎಲ್ಲಾ ಪ್ರಜೆಗಳ ಖಾತೆಗಳಿಗ 15 ಲಕ್ಷ ರುಪಾಯಿ ಜಮಾ ಮಾಡುವಷ್ಟಾಗುತ್ತದೆ ಎಂದು ಹೇಳಿದ್ದರು.
ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾದ ನಂತರ ನರೇಂದ್ರಮೋದಿ ಕಪ್ಪುಹಣ ಪತ್ತೆ ಮಾಡಿ ವಶಪಡಿಸಿಕೊಳ್ಳುವ ಬಗ್ಗೆ ವಿಶೇಷ ಕಾರ್ಯಪಡೆಯನ್ನು ರಚಿಸಿದ್ದರು. ಕಪ್ಪು ಹಣ ಬಿಳಿ ಹಣವನ್ನಾಗಿ ಮಾಡಿಕೊಳ್ಳಲು ಆದಾಯ ಘೋಷಣೆ 2016 ಯೋಜನೆಯನ್ನು ಪ್ರಕಟಿಸಿದ್ದರು. ಅದರಿಂದ ಸುಮಾರು 72,000 ಕೋಟಿ ಕಪ್ಪುಹಣ ಬಂದಿತ್ತು. ನವೆಂಬರ್ ೮ರಂದು ಕಪ್ಪು ಹಣ ನಿಗ್ರಹಿಸುವ ಸಲುವಾಗಿ500 ಮತ್ತು 1000 ನೋಟುಗಳನ್ನು ರದ್ದು ಮಾಡಲಾಯಿತು. 2000 ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಈಗ ದೇಶದ ವಿವಿದಡೆ ದಾಳಿ ಮಾಡುತ್ತಿರವ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು೪೦೦ ಕೋಟಿ ಹೊಸ 2000 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಮುಂದುವರೆದಿದ್ದು,2000 ನೋಟುಗಳು ಕಾಳಧನಿಕರ ಬಳಿ ಪತ್ತೆಯಾಗುತ್ತಲೇ ಇವೆ. ಈ ಹಂತದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಕಪ್ಪು ಹಣ ಎಷ್ಟಿದೆ ಎಂಬುದರ ಬಗ್ಗೆ ಅಧಿಕೃತ ಅಂದಾಜು ಇಲ್ಲ ಎಂದು ತಿಳಿಸಿದ್ದಾರೆ.
