ಗೃಹಸಚಿವ ರಾಜ್'ನಾಥ್ ಸಿಂಗ್ ಅವರು ಕೆಲದಿನಗಳ ಹಿಂದಷ್ಟೇ 2018ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರತ ಹಾಗೂ ಪಾಕ್ ಗಡಿಯನ್ನು ಸಂಪೂರ್ಣ ಬಂದ್ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರೆ ನಫೀಸ್ ಝಾಕರಿಯಾ, 'ನಮಗೆ ಈ ಕುರಿತಂತೆ ಯಾವುದೇ ಮಾಹಿತಿಯಿಲ್ಲ' ಎಂದಿದ್ದಾರೆ.

ಇಸ್ಲಾಮಾಬಾದ್(ಅ.15): ಭಾರತವು 2018ರ ಡಿಸೆಂಬರ್ ವೇಳೆಗೆ ಪಾಕಿಸ್ತಾನದೊಂದಿಗೆ ತನ್ನ ಗಡಿಯನ್ನು ಸಂಪೂರ್ಣ ಬಂದ್ ಮಾಡಲಿದೆ ಎಂಬ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಯಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಸಚಿವ ರಾಜ್'ನಾಥ್ ಸಿಂಗ್ ಅವರು ಕೆಲದಿನಗಳ ಹಿಂದಷ್ಟೇ 2018ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರತ ಹಾಗೂ ಪಾಕ್ ಗಡಿಯನ್ನು ಸಂಪೂರ್ಣ ಬಂದ್ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರೆ ನಫೀಸ್ ಝಾಕರಿಯಾ, 'ನಮಗೆ ಈ ಕುರಿತಂತೆ ಯಾವುದೇ ಮಾಹಿತಿಯಿಲ್ಲ' ಎಂದಿದ್ದಾರೆ.

ಭಾರತ ಸರ್ಕಾರವು ನೆರೆಹೊರೆಯ ದೇಶಗಳೊಂದಿಗೆ ಶಾಂತಿಯುತ ಸಂಬಂಧ ಹೊಂದಬೇಕು ಎಂದು ಹೇಳುತ್ತದೆ. ಆದರೆ ಅದರ ಚಟುವಟಿಕೆಗಳು ಗೊಂದಲವನ್ನು ಹುಟ್ಟಿಸುವಂತಿದೆ ಎಂದು ಡಾನ್ ಪತ್ರಿಕೆಗೆ ಝಾಕರಿಯಾ ತಿಳಿಸಿದ್ದಾರೆಂದು ವರದಿಯಾಗಿದೆ.

ಸೆಪ್ಟೆಂಬರ್ 18 ರಂದು ಭಾರತದ ಉರಿ ಸೇನಾ ನೆಲೆ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸಿ 19 ಯೋಧರನ್ನು ಹತ್ಯೆಮಾಡಿದ್ದರು. ಹೀಗಾಗಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಉಗ್ರರ ದಾಳಿಯನ್ನು ತಡೆಯಲು ಭಾರತ ಹಾಗೂ ಪಾಕ್ ಗಡಿಯನ್ನು ಸಂಪೂರ್ಣ ಮುಚ್ಚುವುದಾಗಿ ರಾಜ್'ನಾಥ್ ಸಿಂಗ್ ಹೇಳಿದ್ದರು.