ದಿನೇಶ್ ಗುಂಡೂರಾವ್’ಗೆ ಪೈಪೋಟಿ ನೀಡುವವರೇ ಇಲ್ಲವಂತೆ..!

First Published 3, Mar 2018, 12:00 PM IST
No Compitater Of Dinesh Gunduro
Highlights

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಅವರೇ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡುವ ಸಮರ್ಥ  ಅಭ್ಯರ್ಥಿಗಳ ಕೊರತೆ ಬಿಜೆಪಿ ಮತ್ತು ಜೆಡಿಎಸ್‌ಗಳನ್ನು ಕಾಡುತ್ತಿದೆ.

ಗಾಂಧಿನಗರ : ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಅವರೇ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡುವ ಸಮರ್ಥ  ಅಭ್ಯರ್ಥಿಗಳ ಕೊರತೆ ಬಿಜೆಪಿ ಮತ್ತು ಜೆಡಿಎಸ್‌ಗಳನ್ನು ಕಾಡುತ್ತಿದೆ.

ಬಿಜೆಪಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಎ. ಎಲ್. ಶಿವಕುಮಾರ್, ಎಂ.ಬಿ.ಶಿವಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಗಂಗಾಧರ್ ಹೆಸರುಗಳು ಚಾಲ್ತಿಯಲ್ಲಿವೆ. ಈ ಪೈಕಿ ಶಿವಕುಮಾರ್ ಬಗ್ಗೆ ಸಂಘ ಪರಿವಾರ ಒಲವು ಹೊಂದಿದೆ. ಕಾಂಗ್ರೆಸ್ ನಿಂದ ವಲಸೆ ಬಂದಿರುವ ಶಿವಪ್ಪ ಯಡಿಯೂರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

ಆದರೆ, ಸ್ಥಳೀಯ ಸಂಸದ ಹಾಗೂ ಗಾಂಧಿನಗರ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಪಿ.ಸಿ. ಮೋಹನ್ ಅವರು ಶಿವಪ್ಪ ಅವರಿಗಿಂತ ಶಿವಕುಮಾರ್‌ರನ್ನು ಬೆಂಬಲಿಸಬಹುದೆಂಬ ಮಾತು ಕೇಳಿಬರುತ್ತಿದೆ. ಜೆಡಿಎಸ್‌ನಿಂದ ಸ್ಥಳೀಯ ಮುಖಂಡ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

loader