ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯರನ್ನು ಎದುರಿಸಲು ಪ್ರಬಲ ನಾಯಕರಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಮೊದಲ ಬಾರಿಗೆ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ ಇಂದಿರಾ ಗಾಂಯವರಿಗೆ ಇತರ ಪಕ್ಷಗಳಿಗಿಂತ ಕಾಂಗ್ರೆಸ್‌ನಲ್ಲಿಯೇ ಅವರನ್ನು ಹೀಯಾಳಿಸಲಾಯಿತು ಸೋನಿಯಾ ನೆನಪಿಸಿಕೊಂಡಿದ್ದಾರೆ.

ನವದೆಹಲಿ(ನ.21): ಪ್ರಧಾನಿ ನರೇಂದ್ರ ಮೋದಿ ಮತ್ತು ದಿ.ಇಂದಿರಾ ಗಾಂಧಿಯವರ ನಡುವೆ ಹೋಲಿಕೆ ಸಾಧ್ಯವಿಲ್ಲ. ಹಾಲಿ ಪ್ರಧಾನಿ ಇಂದಿರಾ ಗಾಂಧಿಯವರಂತೆ ವರ್ತಿಸುತ್ತಿದ್ದಾರೆಂದು ಹೇಳಿದರೆ ಅದರಿಂದ ತಮಗೇನೂ ನಷ್ಟವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂ ಹೇಳಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 44 ಸ್ಥಾನಗಳು ಬಂದಿವೆ. ಮುಂದಿನ ಸಂದರ್ಭಗಳಲ್ಲಿ ಬಹುಮತ ದೊರೆತು ಅಕಾರಕ್ಕೇರುವ ಸಾಧ್ಯತೆಯೂ ಇದೆ ಎಂದಿದ್ದಾರೆ. ‘ಇಂಡಿಯಾ ಟುಡೇ’ ಚಾನೆಲ್ ಜತೆಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು ತಮ್ಮ ರಾಜಕೀಯ ಪ್ರವೇಶ, ಕೌಟುಂಬಿಕ ಜೀವನದ ಬಗ್ಗೆ ಸವಿಸ್ತಾರವಾಗಿ ಮಾತಾಡಿದ್ದಾರೆ. ಅಂದ ಹಾಗೆ ಒಂಭತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟಿವಿ ಚಾನೆಲ್ ಒಂದಕ್ಕೆ ಸೋನಿಯಾ ಸಂದರ್ಶನ ನೀಡಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲವು ಇದ್ದದ್ದೇ. ಅದು ಅವಿಭಾಜ್ಯ ಅಂಗ ಎಂದು ಸೋನಿಯಾ ಒಂದು ಹಂತದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯರನ್ನು ಎದುರಿಸಲು ಪ್ರಬಲ ನಾಯಕರಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಮೊದಲ ಬಾರಿಗೆ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ ಇಂದಿರಾ ಗಾಂಯವರಿಗೆ ಇತರ ಪಕ್ಷಗಳಿಗಿಂತ ಕಾಂಗ್ರೆಸ್‌ನಲ್ಲಿಯೇ ಅವರನ್ನು ಹೀಯಾಳಿಸಲಾಯಿತು ಸೋನಿಯಾ ನೆನಪಿಸಿಕೊಂಡಿದ್ದಾರೆ. ‘‘ಆದರೆ ಎಲ್ಲ ನಿರೀಕ್ಷೆಗಳನ್ನು ಹುಸಿಯಾಗಿಸಿ, ಇಂದಿರಾ ಗಾಂಧಿಯವರು ಪಕ್ಷದ ಅಧ್ಯಕ್ಷ ಸ್ಥಾನ, ಪ್ರಧಾನಿಯಾದರು,’’ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಹಾಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ ಎಂದಿದ್ದಾರೆ.

ಹಿರಿಯರನ್ನು ಅನುಸರಿಸಿದ್ದಾರೆ: ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ ಗಾಂ ‘‘ವೈದ್ಯರು, ಉದ್ಯಮಿಗಳು, ಪ್ರೊಪೆಸರ್‌ಗಳ ಕುಟುಂಬದಲ್ಲಿ ತಂದೆಯ ಹಾದಿಯನ್ನು ಪುತ್ರರು ಅನುಸರಿಸುತ್ತಿದ್ದಾರೆ. ಅದೇ ದಾರಿಯನ್ನು ನಮ್ಮಲ್ಲಿಯೂ ಅನುಸರಿಸಲಾಗಿದೆ. ರಾಜಕೀಯದಲ್ಲಿ ಪ್ರಜಾಸತ್ತಾತ್ಮಕವಾಗಿ ಸೋಲಿಸಲಾಗುತ್ತದೆ ಮತ್ತು ಗೆಲ್ಲಲಾಗುತ್ತದೆ,’’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ರಾಜಕೀಯ ಬೇಕಾಗಿರಲಿಲ್ಲ: ಮೂಲತಃ ತಮ್ಮ ಪತಿ ರಾಜೀವ್ ಗಾಂಧಿ ರಾಜಕೀಯ ಪ್ರವೇಶ ಮಾಡುವುದು ತಮಗೆ ಇಷ್ಟವಿರಲಿಲ್ಲ. ಏಕೆಂದರೆ ಅವರು ಪೈಲಟ್ ಆಗಿಯೇ ಸಂತಸವಾಗಿದ್ದರು. ಆದರೆ ತಮ್ಮ ಅತ್ತೆ ಇಂದಿರಾ ಗಾಂ ಮತ್ತು ಪತಿ ರಾಜೀವ್ ಗಾಂಧಿಯವರು ಕೆಲವೊಂದು ತತ್ವಗಳಿಗಾಗಿ ಹೋರಾಟ ಮಾಡುತ್ತಿದ್ದರು ಎಂದಿದ್ದಾರೆ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ವೇಳೆ ಇಂದಿರಾ ಮಾದರಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಾವು ಇಂದಿರಾ ಗಾಂ ಸೊಸೆಯಾಗದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದಿದ್ದಾರೆ ಸೋನಿಯಾ ಗಾಂಧಿ.