ಹೌದು. ಜಿಎಸ್‌ಟಿಗೂ ಮುನ್ನ ಚಿಕನ್‌ಗೆ ಶೇ.14.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಜಿಎಸ್‌ಟಿಯಲ್ಲಿ ಇದಕ್ಕೆ ವಿನಾಯ್ತಿ ನೀಡಲಾಗಿದೆ. ಹೀಗಾಗಿ ಚಿಕನ್ ಅನ್ನು ಕೆಜಿಗೆ 87 ರು.ಗೆ ಮಾರಾಟ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಆದರೆ ವ್ಯಾಪಾರಿಗಳು ಸಡ್ಡು ಹೊಡೆದಿದ್ದಾರೆ.
ತಿರುವನಂತಪುರಂ(ಜು.10): ಗೋಹತ್ಯೆ ಕುರಿತಂತೆ ಕೇಂದ್ರ ಸರ್ಕಾರದ ಇತ್ತೀಚಿನ ನಿಯಮಗಳ ಬಳಿಕ ಮಾಂಸದ ಕೊರತೆಯ ಬಿಸಿ ಅನುಭವಿಸಿದ್ದ ಕೇರಳಿಗರಿಗೆ, ಸೋಮವಾರದಿಂದ ಕೋಳಿ ಮಾಂಸ ಕೂಡಾ ಮಾರುಕಟ್ಟೆಯಲ್ಲಿ ಸಿಗದು.
ಹೌದು. ಜಿಎಸ್ಟಿಗೂ ಮುನ್ನ ಚಿಕನ್ಗೆ ಶೇ.14.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಜಿಎಸ್ಟಿಯಲ್ಲಿ ಇದಕ್ಕೆ ವಿನಾಯ್ತಿ ನೀಡಲಾಗಿದೆ. ಹೀಗಾಗಿ ಚಿಕನ್ ಅನ್ನು ಕೆಜಿಗೆ 87 ರು.ಗೆ ಮಾರಾಟ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಆದರೆ ವ್ಯಾಪಾರಿಗಳು ಸಡ್ಡು ಹೊಡೆದಿದ್ದಾರೆ. ಈ ಕುರಿತು ಭಾನುವಾರ ಕೇರಳ ಪೌಲ್ಟ್ರಿ ಫೆಡರೇಷನ್ ಜೊತೆಗೆ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿದ್ದು, ಸೋಮವಾರದಿಂದ ಅಂಗಡಿ ಬಾಗಿಲು ತೆಗೆಯದೇ ಇರಲು ಚಿಕನ್ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಹೀಗಾಗಿ ವಿವಾದ ಇತ್ಯರ್ಥವಾಗುವ ತನಕ ರಾಜ್ಯದ ಜನರಿಗೆ ಮಾರುಕಟ್ಟೆಯಲ್ಲಿ ಚಿಕನ್ ಸಿಗದು.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಪೌಲ್ಟ್ರಿ ಫೆಡರೇಷನ್ ಅಧ್ಯಕ್ಷ ಎಂ.ತಜುದ್ದೀನ್, ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳುತ್ತಿರುವ 87 ರು., ರೈತರಿಂದ ನಾವು ಕೊಳ್ಳುವ ಬೆಲೆಯಾಗಿದೆ. ಸಾಗಾಣಿಕೆ ವೆಚ್ಚ, ನೌಕರರ ವೇತನ, ಇತರ ಖರ್ಚುಗಳನ್ನು ಸೇರಿಸಿ 100 ರು.ಗಿಂತ ಕಡಿಮೆ ಬೆಲೆಗೆ ಮಾರುವುದು ಸಾಧ್ಯವೇ ಇಲ್ಲ. ಹೀಗಾಗಿ 87 ರು.ಗೆ ಹೇಗೆ ಮಾರಾಟ ಮಾಡಲು ಹೇಗೆ ಸಾಧ್ಯ ಎಂಬುದನ್ನು ಸಚಿವರು ತೋರಿಸಿಕೊಡಬೇಕು ಎಂದು ಸವಾಲು ಹಾಕಿದ್ದಾರೆ.
