ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಉದ್ಯೋಗಿಗಳಿಗೆ 400 ಅಪಾರ್ಟ್‌ಮೆಂಟ್ ಹಾಗೂ ಒಂದು ಸಾವಿರ ಕಾರುಗಳನ್ನು ಉಡುಗೊರೆ ನೀಡಿ ಭಾರಿ ಸದ್ದು ಮಾಡಿದ್ದ ಸೂರತ್‌ನ ವಜ್ರೋದ್ಯಮಿ ಸಾವಜೀ ಧೋಲಾಕಿಯಾ ಅವರು ಈ ಬಾರಿ ಕಂಪನಿಯ ನೌಕರರಿಗೆ ನಯಾಪೈಸೆ ಗಿಫ್ಟ್ ಕೊಟ್ಟಿಲ್ಲ.
ಅಹಮದಾಬಾದ್/ಮುಂಬೈ: ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಉದ್ಯೋಗಿಗಳಿಗೆ 400 ಅಪಾರ್ಟ್ಮೆಂಟ್ ಹಾಗೂ ಒಂದು ಸಾವಿರ ಕಾರುಗಳನ್ನು ಉಡುಗೊರೆ ನೀಡಿ ಭಾರಿ ಸದ್ದು ಮಾಡಿದ್ದ ಸೂರತ್ನ ವಜ್ರೋದ್ಯಮಿ ಸಾವಜೀ ಧೋಲಾಕಿಯಾ ಅವರು ಈ ಬಾರಿ ಕಂಪನಿಯ ನೌಕರರಿಗೆ ನಯಾಪೈಸೆ ಗಿಫ್ಟ್ ಕೊಟ್ಟಿಲ್ಲ.
ಧೋಲಾಕಿಯಾ ಅವರು ಮಾತ್ರವೇ ಅಲ್ಲ. ಸೂರತ್ನ ಬಹುತೇಕ ವಜ್ರ ವ್ಯಾಪಾರಿಗಳು ಈಗ ‘ಉಳಿತಾಯ ಮಂತ್ರ’ ಜಪಿಸುತ್ತಿದ್ದಾರೆ. ಅಪನಗದೀಕರಣ ಹಾಗೂ ಜಿಎಸ್ಟಿ ಜಾರಿಯಿಂದಾಗಿ ಅವರು ಅನಿವಾರ್ಯವಾಗಿ ಈ ಕ್ರಮಕ್ಕೆ ದೂಡಲ್ಪಟ್ಟಿದ್ದಾರೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಆದರೆ ಹರೇ ಕೃಷ್ಣ ಎಕ್ಸ್ಪೋರ್ಟ್ಸ್ ಮಾಲೀಕರಾಗಿರುವ ಧೋಲಾಕಿಯಾ ಅವರು ಇದನ್ನು ಅಲ್ಲಗಳೆಯುತ್ತಾರೆ. ದೀಪಾವಳಿ ಬೋನಸ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಅಪನಗದೀಕರಣ, ಜಿಎಸ್ಟಿ ಜಾರಿಯಾಗಿದ್ದಕ್ಕೂ ನಾವು ಉಡುಗೊರೆ ಮುಂದೂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಒಂದು ವರ್ಷದಲ್ಲಿ 50 ಸಾವಿರ ರು. ಒಳಗಿನ ಉಡುಗೊರೆಯನ್ನು ನೌಕರರಿಗೆ ನೀಡಿದರೆ ಅದಕ್ಕೆ ತೆರಿಗೆ ಇಲ್ಲ ಎಂದು ಜಿಎಸ್ಟಿ ನಿಯಮ ಹೇಳುತ್ತದೆ. ಆದರೆ ಧೋಲಾಕಿಯಾ ಅವರು ನೀಡುವ ಉಡುಗೊರೆಗಳು ಲಕ್ಷಾಂತರ ರು. ಮೌಲ್ಯದ್ದಾಗಿದ್ದರಿಂದ ಅವರು ಗಿಫ್ಟ್ ನೀಡುವ ಪ್ರಕ್ರಿಯೆಗೆ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂರತ್ನ ಬಹುತೇಕ ವಜ್ರ ವ್ಯಾಪಾರ ಕಂಪನಿಗಳು ಪ್ರತಿ ವರ್ಷ ನೌಕರರಿಗೆ ಭರ್ಜರಿ ಬೋನಸ್ ನೀಡುವುದಕ್ಕೆ ಹೆಸರುವಾಸಿಯಾಗಿವೆ. ಆದರೆ ಈ ವರ್ಷ ದೀಪಾವಳಿ ಬೋನಸ್ ನೀಡುವುದರಿಂದ ಹಿಂದೆ ಸರಿದಿವೆ.
ಜತೆಗೆ ದೇಶದಲ್ಲಿ ವಜ್ರ ಮಾರಿದರೆ ತೆರಿಗೆ ಬರೆ ಬೀಳುತ್ತದೆ ಎಂಬ ಕಾರಣಕ್ಕೆ ಹಾಂಕಾಂಗ್ಗೆ ರಫ್ತು ಮಾಡಲು ಆರಂಭಿಸಿವೆ. ಧೋಲಾಕಿಯಾ ಅವರು 2015ರಲ್ಲೂ 491 ಫಿಯೆಟ್ ಪುಂಟೋ ಕಾರು, 200 ಮನೆ ಹಾಗೂ 1200 ನೌಕರರಿಗೆ ಆಭರಣಗಳನ್ನು ನೀಡಿದ್ದರು.ಅವರ ಕಂಪನಿಯಲ್ಲಿ 5500 ನೌಕರರು ಕೆಲಸ ಮಾಡುತ್ತಿದ್ದು, 6000 ಕೋಟಿ ರು. ವಹಿವಾಟನ್ನು ಕಂಪನಿ ಹೊಂದಿದೆ.
