ಉದ್ಯಮಿ ಪುತ್ರ ವಿದ್ಯತ್ ಮೇಲೆ ಹಲ್ಲೆ ನಡೆಸಿದ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್’ಗೆ ನ್ಯಾಯಾಧೀಶರು ಜಾಮೀನು ಅರ್ಜಿ ನಿರಾಕರಿಸಿದ್ದು  ಮತ್ತೆ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪೊಲೀಸ್ ವಶದಲ್ಲಿರುವ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್’ಗೆ ಹಾಗೂ ಆತನ ಸಹಚರರಿಗೆ ಸಿಟಿ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ನಿರಾಕರಿಸಿದ್ದು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ.

2 ದಿನಗಳ ಕಾಲ ಕಬ್ಬನ್ ಪಾರ್ಕ್ ಪೊಲೀಸ್ ವಶದಲ್ಲಿದ್ದ ನಲಪಾಡ್ ಹಾಗೂ 7 ಮಂದಿ ಸಹಚರರರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ 63ನೇ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿ ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಆರೋಪಿ ಪ್ರಭಾವಿಯೊಬ್ಬರ ಪುತ್ರರಾಗಿದ್ದು ಸರ್ಕಾರಿ ಅಭಿಯೋಜಕರು ಕೂಡ ಸರ್ಕಾರದ ಒಂದು ಭಾಗ ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅನುಮಾನ ಎಂದು ಆಲಂ ಪಾಷ ಎಂಬುವವರು ಮನವಿ ಸಲ್ಲಿಸಿದ್ದರು.