ಹೆಣ್ಣುಮಕ್ಕಳ ಮೇಲೆ ವರದಕ್ಷಿಣೆ ಕಿರುಕುಳ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಇದೇ ನೆಪವಾಗಿಟ್ಟುಕೊಂಡು ಪತಿ ಹಾಗೂ ಅವರ ಮನೆಯವರ ಮೇಲೆ ಸುಳ್ಳು ಕೇಸ್ ಹಾಕುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ (ಜು.28): ಹೆಣ್ಣುಮಕ್ಕಳ ಮೇಲೆ ವರದಕ್ಷಿಣೆ ಕಿರುಕುಳ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಇದೇ ನೆಪವಾಗಿಟ್ಟುಕೊಂಡು ಪತಿ ಹಾಗೂ ಅವರ ಮನೆಯವರ ಮೇಲೆ ಸುಳ್ಳು ಕೇಸ್ ಹಾಕುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ನ್ಯಾ. ಎ.ಕೆ ಗೋಯಲ್ ಮತ್ತು ಯುಯು ಲಲಿತ್ ನೇತೃತ್ವದ ನ್ಯಾಯಪೀಠವು, ಗಂಡ ಹಾಗೂ ಅವರ ಮನೆಯವರ ಹಕ್ಕನ್ನು ಎತ್ತಿ ಹಿಡಿಯುತ್ತಾ, ಅವರ ಮೇಲೆ ಕ್ರಮ ಕೈಗೊಳ್ಳುವ ಮೊದಲು ಸುಳ್ಳು ಪ್ರಕರಣಗಳನ್ನು ಪರಿಶೀಲಿಸಬೇಕಾಗಿರುವ ಸಮಯ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಕುಟುಂಬ ಕಲ್ಯಾಣ ಸಮಿತಿಯನ್ನು ರಚಿಸಿ ಅಲ್ಲಿಗೆ ಬರುವ ಪ್ರತಿಯೊಂದು ದೂರನ್ನು ಪರಿಶೀಲನೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

ಇದೊಂದು ಗಂಭೀರ ವಿಚಾರವಾಗಿದ್ದು, ಸೆಕ್ಷನ್ 498ಎ ಅಡಿಯಲ್ಲಿ ಸಾಕಷ್ಟು ವಿವಾಹಿತ ಮಹಿಳೆಯ ಮೇಲಿನ ವರದಕ್ಷಿಣೆ ಪ್ರಕರಣಗಳ ದಾಖಲಾಗಿವೆ. ಅದರಲ್ಲಿ ಅನೇಕ ಪ್ರಕರಣಗಳು ನಂಬಲರ್ಹವಾಗಿಲ್ಲ. ಕೇಸ್ ದಾಖಲಿಸುವಾಗ ಪರಿಣಾಮಗಳ ಬಗ್ಗೆ ಅರಿವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಕೇಸನ್ನು ಹಾಗೂ ಆರೋಪಿಯನ್ನು ಅನೂರ್ಜಿತಗೊಳಿಸಲಾಗುತ್ತದೆ. ಪತಿ ಹಾಗೂ ಅವನ ಮನೆಯವರಿಗೆ ಜಾಮೀನು ನೀಡಬೇಕೋ ಬೇಡವೋ ಎನ್ನುವ ಬಗ್ಗೆ ವಿಚಾರಣಾಧೀನ ನ್ಯಾಯಾಲಯಗಳು ಕೇಸ್ ದಾಖಲಾದ ದಿನವೇ ನಿರ್ಧರಿಸಬೇಕು. ಪತಿಯ ಮನೆಯವರು ವಿಚಾರಣೆಗೊಳಪಡಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

(ಸಾಂದರ್ಭಿಕ ಚಿತ್ರ)