ನಗರದ ಮಾಲ್‌ ಆಫ್‌ ಮೈಸೂರು ಕಟ್ಟಡದಲ್ಲಿರುವ ಐನಾಕ್ಸ್‌ ಮೂವೀಸ್‌ನಲ್ಲಿ ಶನಿವಾರ ರಾತ್ರಿ 9.50ಕ್ಕೆ ‘ರಾಜಕುಮಾರ' ಚಿತ್ರ ಪ್ರದರ್ಶನ ವೇಳೆ ಎಸಿ ಹಾಕಿರಲಿಲ್ಲ. ಈ ವಿಚಾರ ಪ್ರೇಕ್ಷಕರ ಗಮನಕ್ಕೆ ಬರುತ್ತಿದ್ದಂತೆ ಗಲಾಟೆ ಮಾಡಿ, ಚಿತ್ರಪ್ರದರ್ಶನವನ್ನು ಕೆಲಕಾಲ ಸ್ಥಗಿತಗೊಳಿಸಿದ್ದಾರೆ.

ಮೈಸೂರು: ಬೆಂಗಳೂರಿನ ಮಲ್ಟಿಪ್ಲೆಕ್ಸ್‌ ವೊಂದಲ್ಲಿ ಕನ್ನಡ ಚಲನಚಿತ್ರಕ್ಕೆ ಎ.ಸಿ. ಆಫ್‌ ಮಾಡಿದ ವಿವಾದದ ಬೆನ್ನಲ್ಲೇ ಅಂಥದ್ದೇ ಘಟನೆ ಮೈಸೂರಿನಿಂದಲೂ ವರದಿಯಾಗಿದೆ.

ನಗರದ ಮಾಲ್‌ ಆಫ್‌ ಮೈಸೂರು ಕಟ್ಟಡದಲ್ಲಿರುವ ಐನಾಕ್ಸ್‌ ಮೂವೀಸ್‌ನಲ್ಲಿ ಶನಿವಾರ ರಾತ್ರಿ 9.50ಕ್ಕೆ ‘ರಾಜಕುಮಾರ' ಚಿತ್ರ ಪ್ರದರ್ಶನ ವೇಳೆ ಎಸಿ ಹಾಕಿರಲಿಲ್ಲ. ಈ ವಿಚಾರ ಪ್ರೇಕ್ಷಕರ ಗಮನಕ್ಕೆ ಬರುತ್ತಿದ್ದಂತೆ ಗಲಾಟೆ ಮಾಡಿ, ಚಿತ್ರಪ್ರದರ್ಶನವನ್ನು ಕೆಲಕಾಲ ಸ್ಥಗಿತಗೊಳಿಸಿದ್ದಾರೆ.

ಇದರಿಂದ ಮಲ್ಟಿಪ್ಲೆಕ್ಸ್‌ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕನ್ನಡಿಗರ ಹೋರಾಟಕ್ಕೆ ಮಣಿದ ಮಲ್ಟಿಪ್ಲೆಕ್ಸ್‌ ಸಿಬ್ಬಂದಿ ಎಸಿ ವ್ಯವಸ್ಥೆ ಕಲ್ಪಿಸುವ ಮೂಲಕ ‘ರಾಜ್‌ಕುಮಾರ' ಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ. ಎಸಿಯನ್ನು ಆಫ್‌ ಮಾಡಿರಲಿಲ್ಲ. ಉಷ್ಣಾಂಶ ಕಡಿಮೆ ಇತ್ತು ಎಂದು ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.