ರಾಮನಗರದ ಜಿಲ್ಲಾಧಿಕಾರಿ ಮುಂಭಾಗ ನೂತನವಾಗಿ ನಿರ್ಮಾಣಗೊಂಡಿರೋ ಪಂಚಮುಖಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ನಿತ್ಯಾನಂದನ ಕಾರ್ಯಕ್ರಮವನ್ನು ಚಿತ್ರೀಕರಿಸಲು ಬಂದ ಮಾದ್ಯಮದವರಿಗೆ ಅವಕಾಶ ನೀಡದೇ ನಿತ್ಯಾನಂದನ ಶಿಷ್ಯರು ಉದ್ಧಟತನ ತೋರಿಸಿದ್ದಾರೆ.
ರಾಮನಗರ (ಮಾ. 05): ರಾಮನಗರದ ಜಿಲ್ಲಾಧಿಕಾರಿ ಮುಂಭಾಗ ನೂತನವಾಗಿ ನಿರ್ಮಾಣಗೊಂಡಿರೋ ಪಂಚಮುಖಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ನಿತ್ಯಾನಂದನ ಕಾರ್ಯಕ್ರಮವನ್ನು ಚಿತ್ರೀಕರಿಸಲು ಬಂದ ಮಾದ್ಯಮದವರಿಗೆ ಅವಕಾಶ ನೀಡದೇ ನಿತ್ಯಾನಂದನ ಶಿಷ್ಯರು ಉದ್ಧಟತನ ತೋರಿಸಿದ್ದಾರೆ.
ಮಾಧ್ಯಮದವರು ಇದ್ದರೆ ಉದ್ಘಾಟನೆಗೆ ಆಗಮಿಸುವುದಿಲ್ಲ ಎಂದು ನಿತ್ಯಾನಂದ ಉದ್ದಟತನ ತೋರಿದ್ದಾನೆ. ನಿತ್ಯಾನಂದನ ಶಿಷ್ಯಂದಿರು ದೇವಸ್ಥಾನದ ಆಡಳಿತ ಮಂಡಳಿಯವರ ಮೇಲೆ ಒತ್ತಡ ಹಾಕಿದ್ದಾರೆ. ಮಾಧ್ಯಮದವರು ಹೊರ ಹೋಗುವವರೆಗೂ ಬರುವುದಿಲ್ಲ ಎಂದು ನಿತ್ಯಾನಂದ ಕಾದು ಕುಳಿತಿದ್ದ.
