ನ್ಯಾಯಾಲಯಕ್ಕೆ ತಪ್ಪು ಮಾಹಿತಿಯ ಹೇಳಿಕೆಗಳನ್ನು ನೀಡಿದುದಕ್ಕಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮದ್ರಾಸ್‌ ಹೈಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದಾನೆ.

ಚೆನ್ನೈ: ನ್ಯಾಯಾಲಯಕ್ಕೆ ತಪ್ಪು ಮಾಹಿತಿಯ ಹೇಳಿಕೆಗಳನ್ನು ನೀಡಿದುದಕ್ಕಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮದ್ರಾಸ್‌ ಹೈಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನ ಶತಮಾನಗಳಷ್ಟುಪುರಾತನ ಶೈವಮಠ ಮದುರೈ ಅಧೀನಂನ ಮುಖ್ಯಸ್ಥ ತಾನು ಎಂದು ಪ್ರತಿಪಾದಿಸಿದುದಕ್ಕೆ ಸಂಬಂಧಿಸಿ ನಿತ್ಯಾನಂದ ಕೋರ್ಟ್‌ ಕ್ಷಮೆ ಕೋರಿದ್ದಾನೆ. ಈ ಸಂಬಂಧ ಆತ ನ್ಯಾ. ಮಹಾದೇವನ್‌ ನ್ಯಾಯಪೀಠದ ಮುಂದೆ ಅಫಿಡವಿಟ್‌ ಒಂದನ್ನು ಸಲ್ಲಿಸಿದ್ದಾನೆ.

ಈ ಹಿಂದಿನ ಅಫಿಡವಿಟ್‌ನಲ್ಲಿ ತಾನು ಮಠದ 293ನೇ ಮುಖ್ಯಸ್ಥ ಎಂಬ ತಪ್ಪು ಮಾಹಿತಿಯ ಹೇಳಿಕೆ ನೀಡಿದುದನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲವಾದರೆ, ನಿತ್ಯಾನಂದನ ವಿರುದ್ಧ ಬಂಧನಾದೇಶ ಜಾರಿಗೊಳಿಸಲಾಗುತ್ತದೆ ಎಂದು ಕೋರ್ಟ್‌ ಜ.29ರಂದು ತೀರ್ಪು ನೀಡಿತ್ತು.