ನೀತಿ ಆಯೋಗದ ಉಪಾಧ್ಯಕ್ಷರಾಗಿರುವ ಅರವಿಂದ್ ಪನಗಾರಿಯಾ ಇಂದು ತಮ್ಮ  ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆ.31 ಕ್ಕೆ ಇವರ ಸೇವಾವಧಿ ಮುಕ್ತಾಯಗೊಳ್ಳಲಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲಿದ್ದಾರೆ.  

ನವದೆಹಲಿ (ಆ.01): ನೀತಿ ಆಯೋಗದ ಉಪಾಧ್ಯಕ್ಷರಾಗಿರುವ ಅರವಿಂದ್ ಪನಗಾರಿಯಾ ಇಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆ.31 ಕ್ಕೆ ಇವರ ಸೇವಾವಧಿ ಮುಕ್ತಾಯಗೊಳ್ಳಲಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲಿದ್ದಾರೆ.

ಅರವಿಂದ್ ಪನಗಾರಿಯಾ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿದ್ದರು. ಇಂಡೋ-ಅಮೇರಿಕಾ ಅರ್ಥಶಾಸ್ತ್ರಜ್ಞರು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವಬ್ಯಾಂಕ್, ಐಎಂಎಫ್, ಏಷಿಯನ್ ಡೆವಲಪ್’ಮೆಂಟ್ ಬ್ಯಾಂಕ್’ಗಳಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸಿರುವ ಅಪಾರ ಅನುಭವ ಹೊಂದಿದ್ದಾರೆ.

ತಮ್ಮ ಕಾರ್ಯ ಸಾಧನೆಗಾಗಿ 2012 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ.