ನೂರಾರು ವಿದೇಶಿ ಭಕ್ತರೊಂದಿಗೆ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಆಡಳಿತ ಸಿಬ್ಬಂದಿಗಳು ಕೂಡ ಮಧ್ಯಾಹ್ನ 12.30ಕ್ಕೆ ಬಾಗಿಲು ಬಂದ್ ಮಾಡಬೇಕಾದವರು ಮಧ್ಯಾಹ್ನ ಒಂದು ಗಂಟೆಯಾದರೂ ಬಾಗಿಲು ತೆಗೆದು ನಿಯಮ ಉಲ್ಲಂಘಿಸಿದರು.

ಮೇಲುಕೋಟೆ(ನ.30): ಬಹುದಿನಗಳ ಬಳಿಕ ವಿವಾದಿತ ನಿತ್ಯಾನಂದ ಸ್ವಾಮೀಜಿ ಇವತ್ತು ಮಾಧ್ಯಮಗಳ ಕಣ್ಣಿಗೆ ಬಿದ್ದರು. ಮಂಡ್ಯ ಜಿಲ್ಲೆ ಮೇಲುಕೋಟೆಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ನಿತ್ಯಾನಂದ ಭೇಟಿ ನೀಡಿದ್ದರು. ಮಾಧ್ಯಮಗಳು ಅದಾಗಲೇ ಕಾದು ನಿಂತಿದ್ದನ್ನು ಅರಿತ ನಿತ್ಯಾನಂದ ಬೆಳಗ್ಗೆ ಹತ್ತು ಗಂಟೆಗೆ ಬದಲು, ಮಧ್ಯಾಹ್ನ ಒಂದು ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದರು. ಈ ವೇಳೆ, ಮಾಧ್ಯಮದವರ ಚಿತ್ರೀಕರಣಕ್ಕೆ ನಿತ್ಯಾ ಭಕ್ತರು ತಡೆಯೊಡ್ಡಿದರು.

ನೂರಾರು ವಿದೇಶಿ ಭಕ್ತರೊಂದಿಗೆ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಆಡಳಿತ ಸಿಬ್ಬಂದಿಗಳು ಕೂಡ ಮಧ್ಯಾಹ್ನ 12.30ಕ್ಕೆ ಬಾಗಿಲು ಬಂದ್ ಮಾಡಬೇಕಾದವರು ಮಧ್ಯಾಹ್ನ ಒಂದು ಗಂಟೆಯಾದರೂ ಬಾಗಿಲು ತೆಗೆದು ನಿಯಮ ಉಲ್ಲಂಘಿಸಿದರು.

ಇದೇವೇಳೆ, ನಿತ್ಯಾನಂದನ ನೂರಾರು ಭಕ್ತರು ದೇವಾಲಯದ ಪಡಶಾಲೆಯಲ್ಲೆ ಕುಳಿತು ಸಹಪಂಕ್ತಿ ಭೋಜನ ಮಾಡಿದರು. ನಿತ್ಯಾನಂದ ಭೇಟಿ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ನೀಡದ ಸಿಇಒ ಸತೀಶ್ ದೇವಾಲಯದ ಯಾವುದೇ ನಿಯಮ ಉಲ್ಲಂಘಿಸಿಲ್ಲ ಅಂತ ಸ್ಪಷ್ಟಪಡಿಸಿದರು.