ನೀತಾ ಅಂಬಾನಿ ಸ್ಟೆಪ್ಸ್ ಗೆ ಮುಖೇಶ್ ಬೋಲ್ಡ್ಪುತ್ರ ಆಕಾಶ್ ಅಂಬಾನಿ ವಿವಾಹ ಸಮಾರಂಭವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಡ್ಯಾನ್ಸ್ಮುಖೇಶ್ ಅಂಬಾನಿ ಮುಂದೆ ನೀತಾ ಸ್ಟೆಪ್ಸ್

ಮುಂಬೈ(ಜೂ.30): ರಿಲಯನ್ಸ್ ಗ್ರೂಪ್ ಮಾಲೀಕ ಮುಕೇಶ್ ಅಂಬಾನಿ ಪುತ್ರ ಆಕಾಶ್ ಹಾಗೂ ಶ್ಲೋಕಾ ಮೆಹ್ತಾ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. 

ಮುಂಬೈನಲ್ಲಿರುವ ಅಂಬಾನಿ ಮನೆಯಲ್ಲಿ ನಡೆಯುತ್ತಿರುವ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಹಲವು ಸೆಲೆಬ್ರೆಟಿಗಳು ಭಾಗವಹಿಸಿ ಫೋಟೋಗೆ ಪೋಜ್ ನೀಡಿದರು. ಈ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಕೂಡ ವಿಶೇಷವಾಗಿತ್ತು.

View post on Instagram

ಇನ್ನು ಸಮಾರಂಭದ ವೇಳೆ ಆಕಾಶ್ ಅಂಬಾನಿ ತಾಯಿ ನಿತಾ ಅಂಬಾನಿ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ. ಕೆಂಪು ಬಣ್ಣದ ಸೀರೆಯುಟ್ಟು, ಮೈತುಂಬ ಚಿನ್ನಾಭರಣಗಳನ್ನು ಧರಿಸಿ ಶುಭಾರಂಭ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನೀತಾ ಅಂಬಾನಿ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೀತಾ ಅವರ ಸ್ಟೆಪ್ಸ್ ನ್ನು ನೆಟಿಜನ್ಸ್ ಗಳು ಕೊಂಡಾಡಿದ್ದಾರೆ. ಅಲ್ಲದೇ ನೀತಾ ಮುಖೇಶ್ ಅವರ ಎದುರೇ ಡ್ಯಾನ್ಸ್ ಮಾಡಿದ ರೀತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.