ಸೇತುವೆ ಉದ್ಘಟಿಸಿ ಮಾತನಾಡಿದ ರಕ್ಷಣಾ ಸಚಿವರು, ಅತೀ ಎತ್ತರದ ಪ್ರದೇಶದಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವುದು ಸುಲಭದ ಮಾತಲ್ಲ. ದೇಶದ ನಾನಾ ರಾಜ್ಯಗಳಿಂದ ವೈಪರಿತ್ಯ ವಾತಾವರಣದಲ್ಲಿ ದೇಶ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದು ದೇಶದ ಸೈನಿಕರ ಸೇವೆಯನ್ನು ಕೊಂಡಾಡಿದರು.
ಲೇಹ್(ಸೆ.30): ದೇಶದ ನೂತನ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಶುಕ್ರವಾರದಿಂದ ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಇಂದು ಪ್ರಥಮ್ ಶ್ಯೋಕ್ ಎಂಬ ಸೇತುವೆಯನ್ನು ಉದ್ಘಾಟಿಸಿದರು.
ಬಳಿಕ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ಮಾಡಿದ ಅವರು, ಡುರ್ಬುಕ್ ಮತ್ತು ದೌಲತ್ ಬೇಗ್ ಒಲ್ಡಿ ನಡುವೆ ಶ್ಯೋಕ್ ನದಿಗೆ ಅಡ್ಡವಾಗಿ ಗಡಿ ರಸ್ತೆಗಳ ಸಂಸ್ಥೆ ನಿರ್ಮಿಸಿದ ‘ಪ್ರಥಮ್ ಶ್ಯೋಕ್’ ಸೇತುವೆಯನ್ನು ಉದ್ಘಾಟಿಸಿದರು.
ಸೇತುವೆ ಉದ್ಘಟಿಸಿ ಮಾತನಾಡಿದ ರಕ್ಷಣಾ ಸಚಿವರು, ಅತೀ ಎತ್ತರದ ಪ್ರದೇಶದಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವುದು ಸುಲಭದ ಮಾತಲ್ಲ. ದೇಶದ ನಾನಾ ರಾಜ್ಯಗಳಿಂದ ವೈಪರಿತ್ಯ ವಾತಾವರಣದಲ್ಲಿ ದೇಶ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದು ದೇಶದ ಸೈನಿಕರ ಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಆರ್ಮಿ ಕಮಾಂಡರ್, ಉತ್ತರ ಕಮಾಂಡ್'ಗಳು ಸಚಿವರಿಗೆ ಸಾಥ್ ನೀಡಿದರು.