ಭಾರತ F-16 ಯುದ್ಧ ವಿಮಾನ ಹೊಡೆದುರುಳಿಸಿಲ್ಲ ಎಂದ ಅಮೆರಿಕದ ಮ್ಯಾಗಜಿನ್| ಅಮೆರಿಕದ ಫಾರಿನ್ ಪಾಲಿಸಿ ಮ್ಯಾಗಜಿನ್ ವರದಿ ಪ್ರಕಟ| ವರದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್|‘AMRAAM ಕ್ಷಿಪಣಿಯನ್ನು ಕೇವಲ F-16 ಯುದ್ಧ ವಿಮಾನಗಳು ಬಳಸುತ್ತವೆ’| ಅಮೆರಿಕದ ಮ್ಯಾಗಜಿನ್ ಹಿಡಿದು ಬೊಬ್ಬೆ ಹಾಕಲು ಶುರು ಮಾಡಿದ ಪಾಕಿಸ್ತಾನ| 

ಅಹಮದಾಬಾದ್(ಏ.07): ನೋಡಿ ಉಗ್ರರ ವಿರುದ್ಧ ಬಳಸಲು ನೀವು ಕೊಟ್ಟ F-16 ವಿಮಾನವನ್ನು ಪಾಕಿಸ್ತಾನ ನಮ್ಮ ವಿರುದ್ಧ ಬಳಸುತ್ತಿದೆ ಎಂದು F-16 ವಿಮಾನದ ಅವಶೇಷದ ಸಾಕ್ಷಿ ಸಮೇತ ಭಾರತ ಅಮೆರಿಕಕ್ಕೆ ಮನವರಿಕೆ ಮಾಡಿ ಕೊಟ್ಟಿತ್ತು.

ಆದರೆ ಅಮೆರಿಕ ಮಾತ್ರ ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ನೀಡುವ ಲಕ್ಷಣ ಕಾಣುತ್ತಿದೆ. ಕಾರಣ ಕಳೆದ ತಿಂಗಳು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂದು ಅಮೆರಿಕದ ಫಾರಿನ್ ಪಾಲಿಸಿ ಮ್ಯಾಗಜಿನ್ ವರದಿ ಮಾಡಿದೆ.

Scroll to load tweet…

ಅಂದರೆ ಪಾಕಿಸ್ತಾನ ವಾಯುಪಡೆಗೆ ಸೇರಿದ ಅಮೆರಿಕದ F-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬುದು ಅಮೆರಿಕದ ನಿಲುವಾಗುವ ಲಕ್ಷಣ ಕಾಣುತ್ತಿದೆ.

Scroll to load tweet…

ಆದರೆ ಈ ವರದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, F-16 ವಿಮಾನದ ಬಗ್ಗೆ ಭಾರತೀಯ ವಾಯುಪಡೆ ಎಲೆಕ್ಟ್ರಾನಿಕ್ ಸಹಿಯ ಮೂಲಕ ಸಾಕ್ಷಿ ನೀಡಿದೆ ಎಂದು ಸ್ಪಷ್ಟಪಡಿಸಿದ್ಧಾರೆ. 

AMRAAM ಕ್ಷಿಪಣಿಯನ್ನು ಕೇವಲ F-16 ಯುದ್ಧ ವಿಮಾನಗಳು ಮಾತ್ರ ಬಳಸುತ್ತಿದ್ದು, ಈ ಕ್ಷಿಪಣಿ ಭಾರತದ ನೆಲದಲ್ಲಿ ಸಿಗಲು ಹೇಗೆ ಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

Scroll to load tweet…

ಅತ್ತ ಫಾರಿನ್ ಪಾಲಿಸಿ ವರದಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ವಿಶ್ವಕ್ಕೆ ಸತ್ಯ ಹೇಳುವ ಸರದಿ ಇದೀಗ ಭಾರತದ್ದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಭಾರತದ ಗಡಿ ಪ್ರವೇಶಿಸಲು ಯತ್ನಿಸಿದ್ದ ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದರು. 

ಈ ಜಟಾಪಟಿಯಲ್ಲಿ ಅಭಿನಂದನ್ ಅವರ ಮಿಗ್ ಕೂಡ ಪತನಗೊಂಡು ಅವರು ಪಾಕಿಸ್ತಾನ ಸೇನೆಯ ವಶದಲ್ಲಿದ್ದರು. ಆದರೆ ಭಾರತದ ಸತತ ಪ್ರಯತ್ನಗಳ ಬಳಿಕ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದನ್ನು ಇಲ್ಲಿ ಸ್ಮರಿಸಬಹುದು.