ಲಂಡನ್‌[ಜೂ.13]: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ರು. ವಂಚಿಸಿರುವ ವಜ್ರೋದ್ಯಮಿ ನೀರವ್‌ ಮೋದಿಯ ಜಾಮೀನು ಅರ್ಜಿಯನ್ನು ಇಲ್ಲಿನ ಕೋರ್ಟ್‌ ನಾಲ್ಕನೇ ಬಾರಿಗೆ ತಿರಸ್ಕರಿಸಿದೆ.

ಒಂದು ವೇಳೆ ಜಾಮೀನು ನೀಡಿದರೆ ಪರಾರಿಯಾಗುವ ಸಾಧ್ಯತೆ ಇರುವುದರಿಂದ ನೀರವ್‌ ಮೋದಿಗೆ ಜಾಮೀನು ನೀಡಲು ಲಂಡನ್‌ನ ರಾಯಲ್‌ ಕೋಟ್ಸ್‌ರ್‍ ಆಫ್‌ ಜಸ್ಟೀಸ್‌ನ ನ್ಯಾಯಾಧೀಶೆ ಇಂಗ್ರಿಡ್‌ ಸಿಮ್ಲರ್‌ ನಿರಾಕರಿಸಿದ್ದಾರೆ. ಹೀಗಾಗಿ ನೀರವ್‌ ಮೋದಿ ಇನ್ನು ಮೇಲಿನ ಹಂತದ ನ್ಯಾಯಾಲಯಕ್ಕೆ ಜಾಮೀನು ಕೋರಿ ಮೊರೆ ಹೋಗಬೇಕಾಗಿದೆ.

ನೀರವ್‌ ಮೋದಿ ಗಡಿಪಾರು ಕೋರಿರುವ ಅರ್ಜಿಯ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದ್ದು, ಅದರ ಮುಂದಿನ ವಿಚಾರಣೆ ಜೂ.27ರಂದು ನಡೆಯಲಿದೆ.