Asianet Suvarna News Asianet Suvarna News

ವಿಶ್ವನಾಥ್‌ ರಾಜಕೀಯ ಜೀವನ ಹಾಳಾಗಲು ಇವರೇ ಕಾರಣವಂತೆ

ಜೆಡಿಎಸ್ ಮುಖಂಡ ಎಚ್ ವಿಶ್ವನಾಥ್ ಅವರ ರಾಜಕೀಯ ಜೀವನ ಹಾಳಾಗಲು ಕಾರಣ ಯಾರು ಎನ್ನುವುದಕ್ಕೆ ಇದೀಗ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ಸ್ವಯಂಕೃ​ತ ಅಪ​ರಾ​ಧ​ದಿಂದ ಎಚ್‌.​ವಿ​ಶ್ವ​ನಾಥ್‌ ರಾಜ​ಕೀಯ ಹಾಳಾ​ಗಿ​ದೆ ಎಂದರು.

Niranjanan Nandapuri Swamiji Slams Vishwanath

 ದಾವ​ಣ​ಗೆರೆ :  ತಾವು ಅನ್ಯಾಯಕ್ಕೊಳಗಾದಾಗ ಸ್ವಾಮೀಜಿ ಎಲ್ಲಿ ಹೋಗಿದ್ದರು ಎಂಬ ಶಾಸಕ ಎಚ್‌.ವಿಶ್ವನಾಥ್‌ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು, ಸ್ವಯಂಕೃ​ತ ಅಪ​ರಾ​ಧ​ದಿಂದ ಎಚ್‌.​ವಿ​ಶ್ವ​ನಾಥ್‌ ರಾಜ​ಕೀಯ ಹಾಳಾ​ಗಿ​ದೆಯೇ ಹೊರತು ಯಾರೋ ಮಾಡಿ​ದ್ದಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಜಿಲ್ಲೆಯ ಹರಿ​ಹರ ತಾಲೂಕಿನಲ್ಲಿರುವ ಕಾಗಿ​ನೆಲೆ ಗುರು​ಪೀ​ಠದ ಶಾಖಾಮಠ​ದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ​ನಾಥ್‌ ಕಾಂಗ್ರೆಸ್‌ ಪಕ್ಷ ಬಿಡುವಾಗಲೂ ನಾನೇ ಸಿದ್ದ​ರಾ​ಮಯ್ಯ ಬಳಿ ಹೋಗಿ, ವಿಶ್ವ​ನಾ​ಥ್‌​ರನ್ನು ಪಕ್ಷ ತೊರೆಯದಂತೆ ನೋಡಿಕೊಳ್ಳಿ ಎಂದಿ​ದ್ದೆ. ಆದರೆ ವಿಶ್ವ​ನಾಥ್‌ ಅವರು ಸಿದ್ದ​ರಾ​ಮಯ್ಯ ವಿರು​ದ್ಧವೇ ಕಾಂಗ್ರೆಸ್‌ ಹೈಕ​ಮಾಂಡ್‌ಗೆ ಪತ್ರ ಬರೆ​ದಿ​ದ್ದು, ಆ ಪತ್ರ​ವನ್ನು ಸಿದ್ದ​ರಾ​ಮಯ್ಯ ನನಗೆ ತೋರಿ​ಸಿ​ದ್ದ​ರು. ಸಿದ್ದರಾಮಯ್ಯ ಸುಮ್ಮನಿದ್ದರೂ ವಿಶ್ವನಾಥ್‌ ಅವರು ಸಿದ್ದರಾಮಯ್ಯ ವಿರುದ್ಧ ಟೀಕೆ ಮುಂದುವರಿಸಿದ್ದರು ಎಂದು ವಿವರಿಸಿದರು.

ವಿಶ್ವನಾಥ್‌ ಅವರ ಜೆಡಿಎಸ್‌ ಸೇರ್ಪಡೆ ಬಗ್ಗೆಯೂ ಟಾಂಗ್‌ ನೀಡಿದ ಅವರು, ದೇವೇ​ಗೌಡ್ರು ಘಟ​ಸರ್ಪವಿದ್ದಂತೆ, ಆ ಸ​ರ್ಪದ ಮುಂದೆ ನೀನೊಬ್ಬ ಕಪ್ಪೆ​ ಎಂದು ಸಿದ್ದ​ರಾ​ಮ​ಯ್ಯಗೆ ಒಂದು ಕಾಲ​ದಲ್ಲಿ ಹೋಲಿಸಿ, ಎಚ್ಚ​ರಿಸಿದ್ದ ವಿ​ಶ್ವ​ನಾಥ್‌ ಈಗ ಯಾವ ಘಟ​ಸ​ರ್ಪ, ಕಾಳಿಂಗ ಸರ್ಪದ ಬಳಿ ನಿಂತಿ​ದ್ದಾ​ರೆಂಬುದೇ ಗೊತ್ತಾ​ಗು​ತ್ತಿಲ್ಲ ಎಂದು ಹೇಳಿದರು.

ಆನೆಯು ಕೆರೆ, ಹೊಂಡ​ದಲ್ಲಿ ಸ್ಥಾನ ಮಾಡಿ, ದಡಕ್ಕೆ ಬಂದ ನಂತರ ತನ್ನ ಮೈಮೇಲೆ, ತಲೆ ಮೇಲೆ ತಾನೇ ಮಣ್ಣು ಹಾಕಿ​ಕೊ​ಳ್ಳು​ತ್ತದೆ. ಆನೆ ತಲೆ ಮೇಲೆ ಯಾರೂ ಮಣ್ಣು ಹಾಕು​ವು​ದಿಲ್ಲ. ಅದೇ ರೀತಿಯಲ್ಲಿ ತಮ್ಮ ಮೇಲೆ ತಾವೇ ಮಣ್ಣು ಹಾಕಿ​ಕೊಂಡಿರುವ ವಿಶ್ವನಾಥ್‌ ಈಗ ಕುರುಬ ಸಮಾ​ಜದ ಮೇಲೆ, ಕಾಗಿ​ನೆಲೆ ಕನಕ ಗುರು ಪೀಠದ ಮೇಲೆ ಆಪಾದನೆ ಮಾಡು​ವುದು ​ವಿಶೋಭೆ ತರು​ವು​ದಿಲ್ಲ ಎಂದರು.

ಮಠಾಧಿಪತಿಗಳು ರಾಜಕೀಯ ವಿಚಾರಗಳನ್ನು ಮಾತನಾಡುವುದು ಸರಿಯಲ್ಲ ಎಂಬ ವಿಶ್ವನಾಥ್‌ ಟೀಕೆಗೆ ಉತ್ತರಿಸಿರುವ ಶ್ರೀಗಳು, ನನ್ನ ಸಮಾಜದ ನಾಯ​ಕ​ರಿಗೆ ಅನ್ಯಾ​ಯ​ವಾ​ದಾಗ ಧ್ವನಿ ಎತ್ತು​ತ್ತೇನೆ ಎಂದರು. ಬಿಜೆ​ಪಿ​ಯಲ್ಲಿ ಕೆ.ಎ​ಸ್‌.​ಈ​ಶ್ವ​ರ​ಪ್ಪಗೆ ತೊಂದ​ರೆ​ಯಾ​ದಾ​ಗಲೂ ಮಾತ​ನಾ​ಡಿ​ದ್ದೇನೆ ಎಂದು ಸಮರ್ಥಿಸಿಕೊಂಡರು.

Follow Us:
Download App:
  • android
  • ios