ರಸ್ತೆಬದಿ ನಿಂತಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಹರಿದ ಕಾರು : 9 ಬಾಲಕರ ಸಾವು

First Published 24, Feb 2018, 6:59 PM IST
Nine students killed many injured after being hit by over speeding SUV
Highlights

ಮೃತ ವಿದ್ಯಾರ್ಥಿಗಳೆಲ್ಲರೂ ಧರ್ಮಾಪುರ ಮಧ್ಯ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಗಾಯಗೊಂಡ ಹೆಲವು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ಸೇರಿಸಲಾಗಿದೆ.

ಪಾಟ್ನಾ(ಫೆ.24): ರಸ್ತೆಬದಿ ನಿಂತಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಕಾರು ಹರಿದ ಪರಿಣಾಮ 9 ಬಾಲಕರು ಮೃತಪಟ್ಟ ಘಟನೆ ಬಿಹಾರದ ಮುಝಾಪುರನಗರದಲ್ಲಿ ನಡೆದಿದೆ.

ಜಿಲ್ಲೆಯ ಮಣಿಪುರ ಬ್ಲಾಕ್'ನ ರಾಷ್ಟ್ರೀಯ ಹೆದ್ದಾರಿ 77ರಲ್ಲಿ ಇಂದು ಸುಮಾರು 1.30 ಗಂಟೆಯ ವೇಳೆ ಶಾಲೆಯಿಂದ ಮನೆಗೆ ತೆರಳಲು ರಸ್ತೆ ಬದಿ ನಿಂತಿದ್ದರು. ಆ ಸಮಯದಲ್ಲಿ ವೇಗವಾಗಿ ಬಂದ ಎಸ್'ಯುವಿ ಕಾರು ನಿಯಂತ್ರಣ ತಪ್ಪಿ ಶಾಲಾ ಬಾಲಕರ ಮೇಲೆ ಹರಿದಿದೆ.

ಮೃತ ವಿದ್ಯಾರ್ಥಿಗಳೆಲ್ಲರೂ ಧರ್ಮಾಪುರ ಮಧ್ಯ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಗಾಯಗೊಂಡ ಹೆಲವು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ಸೇರಿಸಲಾಗಿದೆ. ಘಟನೆಯ ನಂತರ ಆರೋಪಿ ಚಾಲಕ ಕೆಲ ದೂರದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಮೃತಪಟ್ಟ ಶಾಲಾ ವಿದ್ಯಾರ್ಥಿಗಳೆಲ್ಲರು 7 ರಿಂದ 12 ವರ್ಷದವರಾಗಿದ್ದಾರೆ.

loader