ಟ್ರಂಪ್ ಕ್ಯಾಬಿನೆಟ್‌'ಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ರಿಪಬ್ಲಿಕನ್ ಪಕ್ಷದ 45 ವರ್ಷದ ನಿಕ್ಕಿ ಪಾತ್ರರಾಗಿದ್ದಾರೆ.

ವಾಷಿಂಗ್ಟನ್(ಜ.25): ವಿಶ್ವಸಂಸ್ಥೆಯ ನೂತನ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರು ಆಯ್ಕೆಯಾಗಿದ್ದಾರೆ. ಈ ಕುರಿತು ಇಂದು ಸೆನೆಟ್‌'ನಲ್ಲಿ ಸರ್ವಾನುಮತದಿಂದ ಘೋಷಿಸಲಾಯಿತು.

ಭಾರತೀಯ ಅನಿವಾಸಿಯೊಬ್ಬರು ಕ್ಯಾಬಿನೆಟ್ ದರ್ಜೆಯ ಹುದ್ದೆಯನ್ನು ಅಲಂಕರಿಸಿರುವುದು ಇದೇ ಮೊದಲು. ಟ್ರಂಪ್ ಕ್ಯಾಬಿನೆಟ್‌'ಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ರಿಪಬ್ಲಿಕನ್ ಪಕ್ಷದ 45 ವರ್ಷದ ನಿಕ್ಕಿ ಪಾತ್ರರಾಗಿದ್ದಾರೆ.

ಸಮಂತಾ ಪವರ್ ಅವರ ಸ್ಥಾನವನ್ನು ನಿಕ್ಕಿ ಅವರು ಅಲಂಕರಿಸಲಿದ್ದಾರೆ. ದಕ್ಷಿಣ ಕರೋಲಿನಾದ ಗವರ್ನರ್ ಸ್ಥಾನಕ್ಕೆ ನಿಕ್ಕಿ ಅವರು ರಾಜಿನಾಮೆ ನೀಡಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರ ಕ್ಯಾಬಿನೆಟ್‌'ಗೆ ಆಯ್ಕೆಯಾಗಿದ್ದರು.

ಶೀಘ್ರದಲ್ಲೇ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.