ಮೈಸೂರು [ಜೂ.17] :  ಎಚ್‌. ವಿಶ್ವನಾಥ್‌ ಅವರ ರಾಜೀನಾಮೆ ಅಂಗೀಕಾರವಾದ ಮೇಲೆ, ಜೆಡಿಎಸ್‌ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯುವ ಜೆಡಿಎಸ್‌ ಘಟಕಕ್ಕೆ ನಿಖಿಲ್‌ ಕುಮಾರಸ್ವಾಮಿ ಹೆಸರು ಕೇಳಿ ಬಂದಿದೆಯೇ ಹೊರತು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲ. 

ಈಗ ವಿಶ್ವನಾಥ್‌ ಅವರು ನೀಡಿರುವ ರಾಜೀನಾಮೆಯೇ ಅಂಗೀಕರವಾಗಿಲ್ಲ. ಅದು ಅಂಗೀಕಾರಗೊಂಡ ಮೇಲೆ ಬದಲಾವಣೆ ಕುರಿತು ಚರ್ಚಿಸಲಾಗುವುದು ಎಂದರು.