‘ಹಿಂದೂ’ ಎಂಬ ಪದ ಮುಂದಿಟ್ಟುಕೊಂಡು ಕೆಲ ಸನಾತನಿಗಳು ಲಿಂಗಾಯತರನ್ನು ಒಡೆಯುವ ಸಂಚು ಮಾಡುತ್ತಿದ್ದು, ಇದಕ್ಕೆ ಲಿಂಗಾಯತರು ಕಿವಿ ಕೊಡಬಾರದು ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ.5ರಂದು ಹುಬ್ಬಳ್ಳಿಯಲ್ಲಿ ನಡೆಯುವ ಲಿಂಗಾ ಯತ ಬೃಹತ್ ರ್ಯಾಲಿ ಅಂಗವಾಗಿ ಗುರುವಾರ ಗದಗಿನ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಇಷ್ಟು ವರ್ಷ ‘ಹಿಂದೂ’ ಎಂಬ ಶಬ್ದದಿಂದಲೇ ನಮ್ಮನ್ನು ಮೋಸ ಮಾಡುವ ಕೆಲಸ ನಡೆಯುತ್ತಿದ್ದು, ಮುಂದೆಯೂ ಅದನ್ನೇ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಸವಣ್ಣನನ್ನು ಓಡಿಸಿದವರು ಮುಸ್ಲಿಮರು, ಕ್ರೈಸ್ತರಲ್ಲ. ಬದಲಾಗಿ ಸನಾತನವಾದಿಗಳು. ರುದ್ರಾಕ್ಷಿ ಮತ್ತು ಲಿಂಗಗಳನ್ನು ತೊಟ್ಟವರ ಮೇಲೆ ನಡೆಸಿದ ದಬ್ಬಾಳಿಕೆ, ಹತ್ಯೆ ಕುರಿತು ದಾಖಲೆಗಳಲ್ಲಿ ಉಲ್ಲೇಖವಿದೆ.

ಈಗಲೂ ರಾಜ್ಯಾದ್ಯಂತ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಲಿಂಗಾಯತರಲ್ಲಿ ಒಗ್ಗಟ್ಟು ಮೂಡದಂತೆ ಮಾಡುತ್ತಿದ್ದಾರೆ. ಹೀಗಾಗಿ, ಲಿಂಗಾಯತರು ಇತಿಹಾಸವನ್ನು ಚೆನ್ನಾಗಿ ಓದಿಕೊಳ್ಳಬೇಕು ಎಂದರು.