ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು
ಬೆಂಗಳೂರು(ಏ.07): ಊಬರ್ ಕ್ಯಾಬ್ನ್ನು ಬುಕ್ ಮಾಡಿ ಊಬರ್ ಚಾಲಕನಿಗೆ ನೈಜೀರಿಯನ್ ಪ್ರಜೆಗಳು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕೆ ಆರ್ ಪುರಂನಲ್ಲಿ ನಡೆದಿದೆ.
ನೆನ್ನೆ ತಡರಾತ್ರಿ ಚಾಲಕ ಸಂತೋಷ್ ಹೊಸೂರ್ ಬಂಡೆ ಬಳಿ ಜೀಫ್ ಎಂಬ ನೈಜೀರಿಯನ್ ಪ್ರಜೆಯನ್ನ ಪಿಕ್ ಅಪ್ ಮಾಡಿದ್ದ. ನಂತರ ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು. ಹೀಗೆ ಸುಮಾರು 22 ಕಿಲೋಮೀಟರ್ ಸುತ್ತಾಡಿಸಿದ್ದಾರೆ. ಅದೂ ಅಲ್ಲದೆ ಕ್ಯಾಬ್ ನಲ್ಲಿ ಕುಡಿದಿದ್ದು ಅದನ್ನ ಪ್ರಶ್ನಿಸಿದಕ್ಕೆ ಹಲ್ಲೆಯನ್ನ ನಡೆಸಿದರು. ಅದಾದ ಬಳಿಕ ಭಟ್ಟರಹಳ್ಳಿಗೆ ಬಂದು ತಮ್ಮ ಮನೆ ಬಳಿ ಬಂದಾಗ ಕ್ಯಾಬ್ನ ಸೀಟಿನಲ್ಲಿ ಬಿಯರ್ಗಳನ್ನು ಚೆಲ್ಲಿದ್ದರೂ ಅದೂ ಅಲ್ಲದೆ ಹಣ ಕೇಳಿದಕ್ಕೆ ಮತ್ತೆ ಹಲ್ಲೆ ನಡೆಸಿ ಅಲ್ಲಿಂದ ಹೊರ ಬಿದ್ದಿದ್ರು. ಈ ಸಂಬಂಧ ಸಂತೋಷ್ ಕೆ.ಆರ್. ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
